94
ಹೊಸದಿಲ್ಲಿ : ಜಗತ್ತಿಂದು ಭಾರತವನ್ನು ಒಂದು ವಿಶ್ವಾಸಾರ್ಹ ಪಾಲುದಾರನೆಂದು ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮಯವನ್ನು ಜಾಗತಿಕ ಅವಕಾಶಗಳ ಲಾಭ ಪಡೆಯಲು ಭಾರತೀಯ ಉದ್ಯಮರಂಗ ದೊಡ್ಡ ಹೆಜ್ಜೆಗಳನ್ನು ಇಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಕರೆ ನೀಡಿದ್ದಾರೆ. ಇದೇ. ವೇಳೆ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವಂತಾಗಬೇಕು ಎಂದೂ ಅವರು ನುಡಿದರು.
ಅವರು ಕಾನೂನು ನಿಯಂತ್ರಣಗಳು, ಹೂಡಿಕೆ ಮತ್ತು ಉದ್ಯಮ ಸುಧಾರಣೆಗಳನ್ನು ಸುಲಲಿತ ಗೊಳಿಸುವುದಕ್ಕೆ ಸಂಬಂಧಿಸಿದ ಬಜೆಟೋತ್ತರ ವೆಬಿನಾರೊಂದನ್ನು ಉದ್ದೇಶಿಸಿ ಮಾತನಾಡಿದರು. ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದ ಪೂರೈಕೆ ಸರಪಣಿಗಳು ಅಸ್ತವ್ಯಸ್ತಗೊಂಡಿರುವ ನಡುವೆಯೇ ವಿಶ್ವಕ್ಕಿಂದು ವಿಶ್ವಾಸಾರ್ಹ ಪಾಲುದಾರರೊಬ್ಬರ ಅಗತ್ಯವಿದೆ.
ಭಾರತದಿಂದ ಇದನ್ನು ಇಂದು ವಿಶ್ವ ನಿರೀಕ್ಷಿಸುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ಅತ್ಯುನ್ನತ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ಒಂದು ವಿಶ್ವಾಸಾರ್ಹ ಪೂರೈಕೆ ಸರಪಣಿಯೊಂದನ್ನು ಹೊಂದಲು ಸಾಧ್ಯವಿದೆ ಎಂದರು

