115
ಕೊಲಂಬೊ : ಜಮ್ಮು-ಕಾಶ್ಮೀರದ ಪಹಲ್ದಾಂ ದಾಳಿಯಲ್ಲಿ ಭಾಗಿಯಾದ 6 ಶಂಕಿತ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ವಿಮಾನದ ಮೂಲಕ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಮೇರೆಗೆ ಶ್ರೀಲಂಕಾ ಪೊಲೀಸರು ಶನಿವಾರ ವಿಮಾನದ ಪರಿಶೀಲನೆ ನಡೆಸಿದ್ದಾರೆ. ಆದರೆ ತಪಾಸಣೆ ಬಳಿಕ ಯಾವುದೇ ಶಂಕಿತರು ಪತ್ತೆ ಆಗಿಲ್ಲ.
ಈ ಬಗ್ಗೆ ಹೇಳಿಕೆ ನೀಡಿರುವ ಲಂಕಾ ಪೊಲೀಸರು, ಚೆನ್ನೈನಿಂದ ಹೊರಟಿದ್ದ ಶ್ರೀಲಂಕಾ ಏರ್‌ಲೈನ್ಸ್ ನ ಯುಎಲ್122 ವಿಮಾನ, ಬೆಳಿಗ್ಗೆ 11:59ಕ್ಕೆ ಲಂಕಾದ ಬಂಡಾರನಾಯಕೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಪಹಲ್ದಾಂ ದಾಳಿಯ 6 ಶಂಕಿತ ಉಗ್ರರು ಶ್ರೀಲಂಕನ್ ಏರ್‌ಲೈನ್ಸ್ ಮೂಲಕ ಕೊಲಂಬೊಕ್ಕೆ ಪರಾರಿಯಾಗಿದ್ದಾರೆಂದು ಚೆನ್ನೈ ಪ್ರದೇಶ ನಿಯಂತ್ರಣಾ ಕೇಂದ್ರ ಸಂದೇಶ ರವಾನಿಸಿತ್ತು. ಹೀಗಾಗಿ ಪ್ರಯಾಣಿಕರ ತಪಾಸಣೆ ಮಾಡಿದೆವು. ಆದರೆ ಯಾವುದೇ ಶಂಕಿತ ವ್ಯಕ್ತಿ ಪತ್ತೆಯಾಗಿಲ್ಲ’ ಎಂದಿದ್ದಾರೆ.

