Home » ಪಾಪಿ ಪಾಕಿಗೆ ಭಾರತ ಮತ್ತೇ 3 ನಿರ್ಬಂಧ
 

ಪಾಪಿ ಪಾಕಿಗೆ ಭಾರತ ಮತ್ತೇ 3 ನಿರ್ಬಂಧ

ಶತ್ರು ದೇಶದಿಂದ ಆಮದು ನಿಷೇಧ, ಅಂಚೆ, ಕೊರಿಯ‌ರ್ ಸೇವೆಗಳು ರದ್ದು, ಪಾಕಿಸಾನಿ ಹಡಗುಗಳಿಗೆ ಪ್ರವೇಶವಿಲ್ಲ

by Kundapur Xpress
Spread the love

ನವದೆಹಲಿ : ಪಹಲ್ಗಾಮ್‌ ಉಗ್ರ ದಾಳಿ ಬಳಿಕ ಪಾಕಿಸ್ನಾನಕ್ಕೆ ತಕ್ಕಪಾಠ ಕಲಿಸಲು ಮುಂದಾಗಿರುವ ಭಾರತವು ನೆರೆಯ ದೇಶದ ಮೇಲೆ 3 ಹೊಸ ನಿರ್ಬಂಧ ಗಳನ್ನು ಹೇರಿದೆ. ಪಾಕಿಸ್ತಾನದಿಂದ ಯಾವುದೇ ವಸ್ತುಗಳ ನೇರ ಮತ್ತು ಪರೋಕ್ಷ ಆಮದಿಗೆ ಬ್ರೇಕ್, ವೈಮಾನಿಕ ಹಾಗೂ ರಸ್ತೆ ಮಾರ್ಗದ ಎಲ್ಲಾ ರೀತಿಯ ಅಂಚೆ ಕೊರಿಯರ್, ಪಾರ್ಸೆಲ್ ಸೇವೆ ರದ್ದು ಹಾಗೂ ಪಾಕ್ ಹಡಗುಗಳು ಭಾರತದ ಬಂದರುಗಳಿಗೆ ಬಂದು ಲಂಗರು ಹಾಕುವುದಕ್ಕೆ ಪೂರ್ಣವಿರಾಮ

26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್‌ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಜತೆಗೆ ಭಾರತ ಒಂದೊಂದೇ ನಿರ್ಬಂಧ ಕ್ರಮಗಳನ್ನು ದಿನಗಳೆದಂತೆ ಕೈಗೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನೀಯರನ್ನು ವಾಪಸ್ ಕಳುಹಿಸಿರುವ ಸರ್ಕಾರ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನೂ ತಡೆಹಿಡಿದಿದೆ

 

Related Articles

error: Content is protected !!