ಹೊಸದಿಲ್ಲಿ : ‘ನಮ್ಮ ಎಲ್ಲ ಮಹಾನ್ ನಾಯಕರು ಅಹಿಂಸೆ ಮತ್ತು ಭಯರಹಿತ ವಾತಾವರಣ ಸೃಷ್ಟಿ ಬಗ್ಗೆ ಮಾತನಾಡುತ್ತಿದ್ದರು. ಆದರೆ ಈಗ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಂಡವರು ಹಿಂಸೆ, ದ್ವೇಷ ಅಸತ್ಯದ ಬಗ್ಗೆ ಮಾತನಾಡುತ್ತಿದ್ದಾರೆ
ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಆಡಿದ ಈ ಮಾತುಗಳು ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ನೇರವಾಗಿ ಹೇಳಿಕೆ ಖಂಡಿಸಿದ್ದಾರೆ. ಈ ಹೇಳಿಕೆ ಮೂಲಕ ಹಿಂದೂಗಳ ಭಾವನೆಗಳಿಗೆ ಫಾಸಿ ಮಾಡಲಾಗಿದ್ದು, ಇಡೀ ಹಿಂದೂ ಸಮುದಾಯವನ್ನೇ ದ್ವೇಷ ಉತ್ಪಾದಿಸುವವರು ಎಂದು ಕರೆದಿರುವುದು ಗಂಭೀರವಾದ ವಿಚಾರ ಎಂದು ಮೋದಿ ಖಂಡನೆ ವ್ಯಕ್ತಪಡಿಸಿದ್ದಾರೆ.ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ವೇಳೆ ನೀಟ್ ಅಕ್ರಮ, ಮಣಿಪುರ ಹಿಂಸಾಚಾರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸದನದ ಗಮನ ಸೆಳೆದ ಪ್ರತಿಪಕ್ಷನಾಯಕ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧವೂ ಆರೋಪಗಳನ್ನೂ ಮಾಡಿದರು. ಈ ಸಂದರ್ಭದಲ್ಲಿ ಹಿಂದೂಗಳ ಕುರಿತು ಆಡಿದ ಮಾತು ಬಿಜೆಪಿ ನಾಯಕರನ್ನು ಕೆರಳಿಸಿತು.
.