ನವದೆಹಲಿ : ಪೋಖ್ರಾನ್ ಫೈರಿಂಗ್ ರೇಂಜ್ ನಲ್ಲಿ ದೂರವ್ಯಾಪ್ತಿಯ ಕ್ಷಿಪಣಿ ಲಾಂಚರ್‌ನಿಂದ ಉಡಾವಣಾ ಪರೀಕ್ಷೆ ಯಶಸ್ವಿಯಾಗಿ ನಡೆಸುವುದರೊಂದಿಗೆ ಭಾರತೀಯ ಸೇನೆ ಯುದ್ಧ ಸನ್ನದ್ಧವಾಗಿರುವುದು ಪುನರ್ ದೃಢೀಕರಿಸಿದೆ. ಮುಂದಿನ ವಾರಗಳಲ್ಲಿ ಪಿನಾಕಾ ಲಾಂಚರ್‌ನಿಂದ ಇನ್ನಷ್ಟು ಕ್ಷಿಪಣಿ ಉಡಾವಣಾ ಪರೀಕ್ಷೆ ನಡೆಸುವ ಮೂಲಕ ರಾಕೆಟ್ ಲಾಂಚರ್‌ನ ಸಾಮರ್ಥ್ಯ ಹೆಚ್ಚಿಸಲಾಗುವುದು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಗೊಳಿಸಿದ ಪಿನಾಕಾ ಸಿಸ್ಟಮ್, ಕೇವಲ 44 ಸೆಕೆಂಡುಗಳಲ್ಲಿ 72 ಕ್ಷಿಪಣಿಗಳನ್ನು ಉಡಾಯಿಸುವ ಅತ್ಯದ್ಭುತ ಫೈರ್ ಪವರ್ ಮತ್ತು 60 ಕಿಮೀ. ದೂರದವರೆಗೆ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಪಿನಾಕಾ ಹೊಂದಿದೆ. ಈ ಆತ್ಯಾಧುನಿಕ ಕ್ಷಿಪಣಿ ಲಾಂಚರ್ 90 ಕಿಮೀ ದೂರದವರೆಗೆ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಪಿನಾಕಾ ಕ್ಷಿಪಣಿ ಲಾಂಚರ್‌ಗಳಲ್ಲಿ ಇನ್ನಷ್ಟು ತಾಂತ್ರಿಕ ಬದಲಾವಣೆ ಮಾಡುವುದರೊಂದಿಗೆ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ವಿಕೃತ ಆವೃತ್ತಿಗಳಲ್ಲಿ 120 ಕಿಮೀ, 150 ಕಿಮೀ ಮತ್ತು 200 ಕಿ.ಮೀ ವ್ಯಾಪ್ತಿ ಸಾಮರ್ಥ್ಯವುಳ್ಳ ಪಿನಾಕಾ ಲಾಂಚರ್‌ನ್ನು ಸೇನೆ ಬಳಕೆಗೆ ತರಲಿದೆ.

