100
ಬೆಂಗಳೂರು : ಕಾಂಗ್ರೆಸ್ ಸರ್ಕಾರದಲ್ಲಿ ದೇಶಭಕ್ತರಿಗೆ ಪರಿಹಾರ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದು ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಸಚಿವರು ಮೃತರು ರೌಡಿಶೀಟರ್ ಆದ್ದರಿಂದ ಅವರ ಮನೆಗೆ ಹೋಗಿಲ್ಲ ಎಂದಿದ್ದಾರೆ. ಆದರೆ, ಎನ್‌ಕೌಂಟರ್‌ನಲ್ಲಿ ದನ ಕಳ್ಳ ಕಬೀರ್ ಹತ್ಯೆಯಾಗಿದ್ದಾಗ ಕಾಂಗ್ರೆಸ್ ಶಾಸಕರು ಮಂತ್ರಿಗಳಾದಿಯಾಗಿ ಅವನ ಮನೆಗೆ ಹೋಗಿದ್ದರೆಂದು ತಿಳಿಸಿದರು
ನಕ್ಸಲ್ ಚೆಕ್ ಪೋಸ್ಟನಲ್ಲಿ ದನ ಕಳ್ಳ ಕಬೀರ್ ಅನುಮಾನಾಸ್ಪದವಾಗಿ ವಾಹನ ನಿಲ್ಲಿಸದೆ ಡಿಕ್ಕಿ ಹೊಡೆದು ವಾಹನ ಒಯ್ದ ಘಟನೆ ನಡೆದಿತ್ತು. ಆಗ ಪೊಲೀಸರು ಗುಂಡು ಹಾರಿಸಿದ್ದರಿಂದ ಕಬೀರ್ ಮೃತಪಟ್ಟಿದ್ದ. ಆತನ ಮೇಲೆ ಹಲವಾರು ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆಗಳಿದ್ದವು. ಹಾಗೆಯೆ ದನಗಳ್ಳನಿಗೆ ಸರ್ಕಾರದ ಕಡೆಯಿಂದ ಹತ್ತು ಲಕ್ಷ ಪರಿಹಾರ ಕೊಡಲಾಗಿತ್ತು ಎಂದು ವಿವರಿಸಿದರು

