156
ಗಾಂಧೀನಗರ : ಅಹಮದಾಬಾದ್ ನಲ್ಲಿ ನಿನ್ನೆ ನಡೆದ ಘೋರ ವಿಮಾನ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ದುರಂತದಲ್ಲಿ 241 ಅಧಿಕ ಮಂದಿ ಪ್ರಯಾಣಿಕರು ಸಾವನ್ನಪ್ಪಿ ವಿಮಾನವೂ ಸುಟ್ಟು ಬೂದಿಯಾಗಿದೆ. ಆದರೆ ವಿಮಾನದ ಅವಶೇಷಗಳಲ್ಲಿ ಭಗವದ್ಗೀತೆ ಪುಸ್ತಕವೊಂದು ಸಿಕ್ಕಿದ್ದು ಇದಕ್ಕೆ ಮಾತ್ರ ಯಾವುದೇ ರೀತಿಯ ಹಾನಿಯಾಗಿಲ್ಲ
ಭಗವದ್ಗೀತೆ ಪುಸ್ತಕದ ಒಂದು ಆವೃತ್ತಿಯೂ ಹಾನಿಯಾಗದೆ ಸಿಕ್ಕಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಹಾನಿಯಾಗದ ಪುಟವನ್ನು ವ್ಯಕ್ತಿಯೊಬ್ಬ ಪ್ರದರ್ಶಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

