Home » ಬೈಕಿಗೆ ಬಸ್‌ ಡಿಕ್ಕಿ : ಗಂಭೀರ
 

ಬೈಕಿಗೆ ಬಸ್‌ ಡಿಕ್ಕಿ : ಗಂಭೀರ

by Kundapur Xpress
Spread the love

ಸಾಲಿಗ್ರಾಮ : ಸಾಲಿಗ್ರಾಮದ ಜಂಕ್ಷನ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ

ರಾಷ್ಟ್ರೀಯ ಹೆದ್ದಾರಿ 66 ರ ಸಾಲಿಗ್ರಾಮ ದೇವಸ್ಥಾನದ ಸರ್ಕಲ್ ನಲ್ಲಿ ಈ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಬೈಕ್ ಸವಾರ ಬಾರ್ಕೂರು ಹೊಸಾಳ ಗ್ರಾಮದ ಸುಧಾಕರ ಮೊಗವೀರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಖಾಸಗಿ ಬಸ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!