ಸಿಯೋಲ್ : ದಕ್ಷಿಣ ಕೊರಿಯಾ ಕಂಡ ಭೀಕರ ವಿಮಾನ ಅಪಘಾತದಲ್ಲಿ ಭಾನುವಾರ ಮುಂಜಾನೆ ಪ್ರಯಾಣಿಕರ ವಿಮಾನ ರನ್ ವೇಯಿಂದ ಜಾರಿ, ಲ್ಯಾಂಡಿಂಗ್ ಗೇರ್ ವಿಫಲವಾದ ಕಾರಣ ಕಾಂಕ್ರೀಟ್ ಗೋಡೆಗೆ ಅಪ್ಪಳಿಸಿದ ಪರಿಣಾಮ ವಿಮಾನದಲ್ಲಿದ್ದ 181 ಜನರಲ್ಲಿ 179 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ
ಥೈಲ್ಯಾಂಡ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಿಂದ ಹೊರಟಿದ್ದ 15 ವರ್ಷ ಹಳೆಯ ಪ್ರಯಾಣಿಕ ವಿಮಾನ ರಾಜಧಾನಿ ಸಿಯೋಲ್‌ನ ದಕ್ಷಿಣಕ್ಕೆ ಸುಮಾರು 290 ಕಿ.ಮೀ (180 ಮೈಲಿ) ದೂರದಲ್ಲಿರುವ ಮುವಾನ್ ಪಟ್ಟಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ ಎಂದು ದ. ಕೊರಿಯಾ ಸಾರಿಗೆ ಸಚಿವಾಲಯ ತಿಳಿಸಿದೆ
ಬೆಂಕಿ ನಂದಿಸಲು ಅಗ್ನಿಶಾಮಕ ಸಂಸ್ಥೆಯು 32 ಅಗ್ನಿಶಾಮಕ ಟ್ರಕ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು. ಸುಮಾರು 1,570 ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಸಸಚಿವಾಲಯ ತಿಳಿಸಿದೆ