Home » ಸ್ವದೇಶಿ ಉತ್ಪನ್ನ ಬಳಸಿ : ಜನತೆಗೆ ಪ್ರಧಾನಿ ಮೋದಿ ಕರೆ
 

ಸ್ವದೇಶಿ ಉತ್ಪನ್ನ ಬಳಸಿ : ಜನತೆಗೆ ಪ್ರಧಾನಿ ಮೋದಿ ಕರೆ

ವಿಶ್ವಾದ್ಯಂತ ಆರ್ಥಿಕ ಅಸ್ಥಿರತೆ ಆದರೆ ಭಾರತ 3ನೇ ಬೃಹತ್‌ ಆರ್ಥಿಕತೆಯಾಗುವತ್ತ ದಾಪುಗಾಲು

by Kundapur Xpress
Spread the love

ವಾರಾಣಾಸಿ : ‘ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವ ಆರ್ಥಿಕತೆ ಎದುರಿಸುತ್ತಿರುವ ಅಸ್ಥಿರತೆ ಮತ್ತು ಅನಿಶ್ಚಿತತೆಯ ನಡುವೆಯೂ ದೇಶವು ತನ್ನದೇ ಆದ ಆರ್ಥಿಕ ಆದ್ಯತೆಗಳ ಬಗ್ಗೆ ಎಚ್ಚರದಿಂದಿರಬೇಕು. ಸ್ವದೇಶಿ ಉತ್ಪನ್ನಗಳತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಈ ಮೂಲಕ ‘ಭಾರತದ ಆರ್ಥಿಕತೆ ಸತ್ತಿದೆ’ ಎಂದು ಹೇಳಿ ಭಾರತದ ವಸ್ತುಗಳ ಮೇಲೆ ಶೇ.25 ಆಮದು ಸುಂಕ ಹೇರಿದ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

ಶನಿವಾರ ವಾರಾಣಸಿಯಲ್ಲಿ ಸಾರ್ವಜನಿಕರ ನ್ನುದ್ದೇಶಿಸಿ ಮಾತನಾಡಿದ ಮೋದಿ, ಜಾಗತಿಕ ಆರ್ಥಿಕತೆಯು ಅಸ್ಥಿರತೆ ಮತ್ತು ಅನಿಶ್ಚಿತತೆಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಿರುವಾದ ರಾಷ್ಟ್ರಗಳು ತಮ್ಮ ಹಿತಾಸಕ್ತಿಯ ಬಗ್ಗೆ ಯೋಚಿಸು ತ್ತಿವೆ. ಭಾರತವು 3ನೇ ದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದು, ನಮಗೆ ನಮ್ಮ ಆರ್ಥಿಕ ಆದ್ಯತೆಯ ಅರಿವಿರಬೇಕು. ಇದಕ್ಕೆ ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವುದು ಅಗತ್ಯ ಎಂದು ಪ್ರಸ್ತುತ ಸ್ಥಿತಿಯನ್ನು ವಿವರಿಸಿದರು.

‘ಎಲ್ಲರೂ ಸ್ವದೇಶಿ ಮನೋಭಾವವನ್ನು ಅಳವಡಿಸಿಕೊಳ್ಳಿ. ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವುದೇ ನಿಜವಾದ ದೇಶಸೇವೆ ಎಂದ ಮೋದಿ, ‘ರೈತರು, ಸಣ್ಣ ಕೈಗಾರಿಕೆಗಳು ಮತ್ತು ಯುವಕರಿಗೆ ಉದ್ಯೋಗವು ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ನುಡಿದರು

 

Related Articles

error: Content is protected !!