Home » ತಿಂಗಳಲ್ಲಿ 100 ಕೋಟಿ ಸಸಿ
 

ತಿಂಗಳಲ್ಲಿ 100 ಕೋಟಿ ಸಸಿ

ಮನ್‌ ಕೀ ಬಾತ್

by Kundapur Xpress
Spread the love

ಹೊಸದಿಲ್ಲಿ : ಎಕ್ ಪೇಡ್ ಮಾ ಕೆ ನಾಮ್ ಅಭಿಯಾನದಲ್ಲಿ ಕೇವಲ ತಿಂಗಳಲ್ಲಿ 100 ಕೋಟಿ ಸಸಿಗಳನ್ನು ನೆಡಲಾಗಿದೆ ಎಂದು ಪ್ರಧಾನಿ ನರೇಂದ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಆಕಾಶವಾಣಿಯ ಮನ್ ಕೀ ಬಾತ್ ಕಾರ್ಯಕ್ರಮದ 116ನೇ ಆವೃತ್ತಿಯಲ್ಲಿ ಶೋತೃಗಳೊಂದಿಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡ ಮೋದಿ, ದೇಶವಾಸಿಗಳೆಲ್ಲರು ಉತ್ಸಾಹದಿಂದ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಮಾತ್ರವಲ್ಲದೆ, ಅಭಿಯಾನ ಇತರ ರಾಷ್ಟ್ರಗಳಿಗೂ ವಿಸ್ತರಣೆಯಾಗುತ್ತಿರುವುದು ಭಾರತದ ಪರಿಸರ ‘ಕಾಳಿಜಿಯ ಅಭಿಯಾನಕ್ಕೆ ಜಗತ್ತಿನ ಬೇರೆ ಭಾಗಗಳಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.

ಸರ್ಕಾರದಲ್ಲಿ ಡಿಜಿಟಲ್ ಅರೆಸ್ಟ್ ಇಲ್ಲ:

ಸರಕಾರದ ವ್ಯವಸ್ಥೆಯಲ್ಲಿ ಡಿಜಿಟಲ್ ಬಂಧನ ಎಂಬುದಿಲ್ಲ ಎಂಬುದನ್ನು ದೇಶದ ಪ್ರತಿಯೋರ್ವ ಹಿರಿಯ ನಾಗರಿಕರ ಸಹಿತ ಎಲ್ಲರಿಗೂ ಸಾರಿ ಹೇಳಬೇಕು. ಇದೊಂದು ಹಸಿ ಸುಳ್ಳು ಮತ್ತು ಜನರನ್ನು ಮೋಸದ ಬಲೆಗೆ ಕೆಡಹುವ ಷಡ್ಯಂತ್ರವೆಂಬ ವಾಸ್ತವವನ್ನು ಜನರಿಗೆ ತಿಳಿಸಬೇಕೆಂದು ಸಲಹೆ ಮಾಡಿದ ಪ್ರಧಾನಿ, ಈ ವಿಚಾರದಲ್ಲಿ ದೇಶದ ಯುವಶಕ್ತಿ ಪೂರ್ಣ ಸಂವೇದನಾಶೀಲತೆಯಿಂದ ಕಾರ್ಯತತ್ಪರರಾಗಿರುವುದು ಮತ್ತು ಇತರರಿಗೂ ಪ್ರೇರಣದಾಯಿಯಾಗಿರುವುದು ಎಂದರು

ತಾನು ಕೆಲ ದಿನಗಳ ಹಿಂದೆ ಪ್ರವಾಸಗೈದ ಗಯಾನ ಒಂದು ಮಿನಿ ಭಾರತ. ಸುಮಾರು 180 ವರ್ಷಗಳ ಹಿಂದೆ ಗಯಾನದ ಗದ್ದೆಗಳಲ್ಲಿ ದುಡಿಯಲು ಮತ್ತಿತರ ಕೆಲಸಗಳಿಗಾಗಿ ಭಾರತೀಯರನ್ನು ಗಯಾನಗೆ ಕರೆದೊಯ್ಯಲಾಗಿತ್ತು. ಇದೇ ಭಾರತೀಯರಿಂದು ಗಯಾನದಲ್ಲಿ ಅಲ್ಲಿನ ರಾಜಕೀಯ ,ಉದ್ಯಮ, ಸಂಸ್ಕೃತಿ ಶಿಕ್ಷಣ ಸಹಿತ ಎಲ್ಲಾ ರಂಗಗಳಲ್ಲೂ ದೇಶವನ್ನು ಮುನ್ನಡೆಸುತ್ತಿರುವುದು ಖುಷಿ ವಿಚಾರ. ಸ್ವತಃ ಅಧ್ಯಕ್ಷ ಡಾ.ಇರ್ಫಾನ್ ಆಲಿ ಕೂಡ ಭಾರತೀಯ ಮೂಲದವರಾಗಿದ್ದು, ಭಾರತೀಯ ಪರಂಪರೆ ಬಗ್ಗೆ ಇಂದಿಗೂ ಹೆಮ್ಮೆ ಕಾಯ್ದುಕೊಂಡಿದ್ದಾರೆಂದು ಪ್ರಶಂಸಿಸಿದರು

   

Related Articles

error: Content is protected !!