107
ನವದೆಹಲಿ : ದೇಶವೊಂದರ ಸಂಸ್ಕೃತಿ ಹಾಗೂ ನಾಗರಿಕತೆಗೆ ಅದರ ಹಾಡು ಹಾಗೂ ಸಂಗೀತದಿಂದಲೇ ಧ್ವನಿ ದೊರಕುತ್ತದೆ. ಸೂಫಿ ಸಂಪ್ರದಾಯವು ಭಾರತದಲ್ಲಿ ತನ್ನದೇ ಆದಂತಹ ವಿಶೇಷ ಸಂಸ್ಕೃತಿಯನ್ನು ಚಿತ್ರಿಸಿ ಕೊಂಡಿದೆ. ಸೂಫಿ ಸಂತರು ವೇದಪ್ರಿಯರಾಗಿದ್ದರು ಹಾಗೂ ವೇದ ಆಲಿಸುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಇಲ್ಲಿನ ಸುಂದರ್ ನರ್ಸರಿಯಲ್ಲಿ ನಡೆದ ಸೂಫಿಗಳ ಜಹಾನ್-ಎ-ಖುಸ್ರೋ’ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ, ರಂಜಾನ್ ತಿಂಗಳ ಶುಭಾಶಯ ತಿಳಿಸುತ್ತಾ, ಕಳೆದ 25 ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಜನರ ಮನಸ್ಸುಗಳಲ್ಲಿ ಜಾಗ ಮಾಡಿಕೊಂಡಿದೆ. ಇದು ದೊಡ್ಡ ಯಶ ಸ್ಸಾಗಿದೆ’ ಎಂದು ಪ್ರಶಂಸಿಸಿದರು

