79
ಬಿಕಾನೆರ್ : ಸಿಂದೂರವು ಗನ್ ಪೌಡರ್ ಆದಲ್ಲಿ ಏನಾಗುತ್ತೆ ಎಂಬುದು ಶತ್ರು ದೇಶಕ್ಕೆ ಸ್ಪಷ್ಟ ಅರಿವಾಗಿದೆ. ಬಿಸಿ ಬಿಸಿ ಸಿಂದೂರ ವಿಂದು ನನ್ನ ನರನಾಡಿಗಳಲ್ಲಿ ಹರಿಯುತ್ತಿದೆ. ಪಾಕಿಸ್ತಾನ ಭಾರತೀಯರ ನೆತ್ತರ ಜತೆ ಆಟವಾಡಲು ಪ್ರಯತ್ನಿಸಿದಲ್ಲಿ ದುಬಾರಿ ಬೆಲೆ ತೆರಬೇಕಾದೀತು ಎಂದು ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನವು ತನ್ನ ಅನ್ಯಾಯಕ್ಕೆ ಪ್ರತಿಯಾಗಿ ನಿರ್ವಾಹವಿಲ್ಲದೆ ಮಂಡಿಯೂರುವಂತೆ ಮಾಡಿದ ದೇಶದ ಸಶಸ್ತ್ರ ಪಡೆಗಳ ತಾಕತ್ತನ್ನು ಮೋದಿ ಕೊಂಡಾಡಿದ್ದಾರೆ
ಪಹಲ್ಗಾಮ್‌ನಲ್ಲಿ ಏ.22ರಂದು ಪಾಕ್ ಮೂಲದ ಭಯೋತ್ಪಾದಕರು ನಡೆಸಿದ ಹಿಂದು ಪ್ರವಾಸಿಗರ ಹತ್ಯೆಗಳಿಗೆ ಪ್ರತಿಯಾಗಿ, ನಾವು ಕೇವಲ 22 ನಿಮಿಷಗಳಲ್ಲಿ ಭಯೋತ್ಪಾದಕರ 9 ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಎಂದು ಮೋದಿ ನುಡಿದರು. ಆಪರೇಷನ್ ಸಿಂದೂರ ನಂತರದಲ್ಲಿ, ಪಾಕ್ ಜತೆ ಗಡಿ ಹಂಚಿಕೊಂಡಿರುವ ರಾಜಸ್ತಾನದ ಬಿಕಾನೆರ್‌ನ ಪಲಾನಾದಲ್ಲಿ ಪ್ರಥಮ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಪಾಲ್ಗೊಂಡರು.

