ಹೊಸದಿಲ್ಲಿ : ಕಳೆದ ವರ್ಷ ಭಾರತದ ಅಧ್ಯಕ್ಷತೆ ಯಲ್ಲಿ ನಡೆದ ಜಿ-20 ಯಶಸ್ಸನ್ನು ಆಧಾರವಾಗಿರಿಸಿಕೊಂಡು ಕೂಟವನ್ನು ಮತ್ತಷ್ಟು ಬಲಿಷ್ಠವಾಗಿಸಲು ವಿಸ್ತ್ರತ ಕಾರ್ಯತಂತ್ರ ಒಳಗೊಂಡ ಈ ಬಾರಿಯ ಜಿ-20 ಶೃಂಗಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆಯುವುದೆಂದು ನಿರೀಕ್ಷಿಸಿರುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ
ಶನಿವಾರ ನೈಜೀರಿಯ, ಬ್ರೆಜಿಲ್ ಮತ್ತು ಗಯಾನಾಗೆ 5 ದಿನಗಳ ಪ್ರವಾಸ ಹೊರಡುವ ಮುನ್ನ ಹೇಳಿಕೆಯಲ್ಲಿ ಮೋದಿ, ಜಿ-20ಕೂಟದ ಸದಸ್ಯನಾಗಿ ತಾವು ಬ್ರೆಜಿಲ್‌ನಲ್ಲಿ 19ನೇ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.
ಕಳೆದ ವರ್ಷ ಭಾರತದ ಯಶಸ್ವಿ ಅಧ್ಯಕ್ಷತೆಯಲ್ಲಿ ಜಿ-20ಯನ್ನು ಜನರ ಜಿ-20 ಯಾಗಿ ಮೇಲ್ದರ್ಜೆಗೇರಿಸುವಲ್ಲಿ ಯಶಸ್ವಿಯಾಗಿತ್ತು. ಜಾಗತಿಕ ದಕ್ಷಿಣದ ಪ್ರಾಧಾನ್ಯತೆಗಳನ್ನು ತನ್ನ ಕಾರ್ಯಸೂಚಿಯಲ್ಲಿ ಒಳಗೊಳ್ಳುವಲ್ಲೂ ಯಶಸ್ವಿಯಾ ಗಿತ್ತು ಎಂದು ಪ್ರಧಾನಿ ನೆನಪಿಸಿದ್ದಾರೆ