Home » ನಾನು ಇನ್ನು ಹೆಚ್ಚು ಕಾಲ ಬದುಕೋದಿಲ್ಲ
 

ನಾನು ಇನ್ನು ಹೆಚ್ಚು ಕಾಲ ಬದುಕೋದಿಲ್ಲ

: ಪೋಪ್

by Kundapur Xpress
Spread the love

ರೋಮ್: ಉಸಿರಾಟ ಸಂಬಂಧಿ ವ್ಯಾಧಿಯಾದ ನ್ಯುಮೋನಿಯಾದಿಂದ ಬಳಲುತ್ತಿರುವ ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್, ತಾವಿನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ತಮ್ಮ ಆಪ್ತ ಸಹಾಯಕರಿಗೆ ಹೇಳಿರುವುದಾಗಿ ವರದಿಯಾಗಿದೆ. 88 ವರ್ಷದ ಇವರನ್ನು ಕಳೆದ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡೂ ಶ್ವಾಸಕೋಶಗಳಲ್ಲಿ ನ್ಯುಮೋನಿಯಾ ಇರುವುದು ಪತ್ತೆಯಾಗಿತ್ತು. ಬಳಿಕ ಸೋಮವಾರ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ವ್ಯಾಟಿಕನ್ ತಿಳಿಸಿತ್ತು. ಬುಧವಾರ ಕೂಡ ಅವರು ಸುಖನಿದ್ರೆಯ ಬಳಿಕ ಬೆಳಗಿನ ಉಪಾಹಾರ ಸೇವಿಸಿದ್ದರು ಎನ್ನಲಾಗಿತ್ತು. ಇದರ ಬೆನ್ನಲ್ಲೇ ತಮ್ಮ ಚೇತರಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

 

Related Articles

error: Content is protected !!