Home ರಾಷ್ಟ್ರೀಯ ಸುದ್ದಿಎನ್‌ಐಎಯಿಂದ ಉಗ್ರನ ಬಂಧನ

ಎನ್‌ಐಎಯಿಂದ ಉಗ್ರನ ಬಂಧನ

by Kundapur Xpress

ಬನವಾಸಿ : ಆನ್‌ಲೈನ್‌ನಲ್ಲಿ ಭಯೋತ್ಪಾದಕ ಸಂಘಟನೆಗಳ ಜತೆ ನಿಕಟ ಸಂಪರ್ಕಹೊಂದಿದ್ದ ಆರೋಪದ ಮೇಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಓರ್ವ ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳ ತಂಡ ವಶಕ್ಕೆ ಪಡೆದು ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದೆ

ಬನವಾಸಿಯ ಅಬ್ದುಲ್ ಸುಕ್ಕೂರ್ (32ವರ್ಷ)ನನ್ನು ವಶಕ್ಕೆ ಪಡೆದಿರುವ ಎನ್‌ಐಎ ತನಿಖೆ ಕೈಗೊಂಡಿದೆ. ಮಂಗಳವಾರ ಐದು ಮಂದಿ ಅಧಿಕಾರಿಗಳಿರುವ ಎನ್‌ಐಎ ತಂಡ ಹಾಗೂ ರಾಜ್ಯದ ಗುಪ್ತಚರ ಅಧಿಕಾರಿಗಳು ದಾಳಿ ನಡೆಸಿದ್ದು, ರಾಮೇಶ್ವರಂ ಕಫೆ ಸ್ಫೋಟ, ಕುಕ್ಕರ್ ಬಾಂಬ್ ಸ್ಫೋಟ ಆರೋಪಿಗಳಿಗೆ ಪ್ರಚೋದನೆ ನೀಡಿದ ಆರೋಪ ಈತನ ಮೇಲಿದೆ. ಈ ಜೊತೆಗೆ ಪಾಸ್‌ಪೋರ್ಟ್‌ನಲ್ಲಿ ನಕಲಿ ದಾಖಲೆ ನೀಡಿರುವ ಆರೋಪವೂ ಇರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬಕ್ಕಾಗಿ ದುಬೈನಿಂದ ಆಗಮಿಸಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಕರೆದೊಯ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ

Related Articles