Home » ನಾರಿ ಶಕ್ತಿಯಿಂದ ವಿಕಸಿತ ಭಾರತ ನಿರ್ಮಾಣ ಗುರಿ
 

ನಾರಿ ಶಕ್ತಿಯಿಂದ ವಿಕಸಿತ ಭಾರತ ನಿರ್ಮಾಣ ಗುರಿ

by Kundapur Xpress
Spread the love

ಹೊಸದಿಲ್ಲಿ: ಭಾರತದಲ್ಲಿ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ನೇತೃತ್ವ ರಾಷ್ಟ್ರಪತಿ ದ್ರೌಪದಿ ಮುರ್ಮು ವಹಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನಾರಿ ಶಕ್ತಿಯಿಂದ ವಿಕಸಿತ ಭಾರತ (ನಾರಿ ಶಕ್ತಿ ಸೆ ವಿಕಸಿತ ಭಾರತ್) ಎಂಬ ವಿಷಯದ ಮೇಲೆ ರಾಷ್ಟ್ರಮಟ್ಟದ ಸಮ್ಮೇಳನವನ್ನು ಆಯೋಜಿಸಿದೆ.

ಇದರಲ್ಲಿ ವ್ಯವಹಾರ, ಕ್ರೀಡೆ, ಮಾಧ್ಯಮ ಮತ್ತು ಆಡಳಿತದ ಪ್ರಸಿದ್ದ ಮಹಿಳಾ ನಾಯಕರೊಂದಿಗೆ ಚರ್ಚೆಗಳು ನಡೆದಿವೆ .ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಮೋ ಆಪ್ ಓಪನ್ ಫೋರಂನಲ್ಲಿ ತಮ್ಮ ಸ್ಫೂರ್ತಿದಾಯಕ ಜೀವನ ಕಥೆಗಳನ್ನು ಹಂಚಿಕೊಳ್ಳಲು ಮಹಿಳೆಯರಿಗೆ ಆಹ್ವಾನ ನೀಡಿದ್ದಾರೆ. ರಾಷ್ಟ್ರೀಯ, ಜನಾಂಗೀಯ, ಭಾಷಾ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಗಡಿಗಳನ್ನು ಮೀರಿ ಮಹಿಳೆಯರ ಸಾಧನೆಗಳನ್ನು ಗುರುತಿಸಲು ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.

 

Related Articles

error: Content is protected !!