ನಾಗುರ: ಸಂಸ್ಕೃತ ಭಾರತದ ಎಲ್ಲಾ ಭಾಷೆಗಳಿಗೂ ಮಾತೃ ಸಮಾನ. ಈ ಹಿರಿಯ ಭಾಷೆ ಸಂವಹನದ ಮಾಧ್ಯಮವಾಗಬೇಕು ಮತ್ತು ದೇಶದ ಪ್ರತಿ ಮನೆ ಮನೆಗೂ ತಲುಪುವಂತಾಗಬೇಕು ಎಂದು ಆರೆಸ್ಸೆಸ್ ಸರಸಂಘಚಾಲಕ್ ಡಾ.ಮೋಹನ್ ಭಾಗ್ವತ್ ಕರೆ ನೀಡಿದ್ದಾರೆ.
ಸಂಸ್ಕೃತದ ಸಂರಕ್ಷಣೆ ಮತ್ತು ಪ್ರಚಾರ ಮುಖ್ಯ. ನಮ್ಮ ಭಾವನೆಗಳನ್ನು ಬೆಳೆಸುವ ಭಾಷೆಯಿದಾಗಿದೆ. ಪ್ರತಿಯೋರ್ವರೂ ಈ ಪ್ರಾಚೀನ ಭಾಷೆ ಅರಿಯ ಬೇಕೆಂದು ಅವರು ಕರೆ ನೀಡಿದರು. ನಾಗುರದ ಕವಿ ಕುಲಗುರು ಕಾಳಿದಾಸ ಸಂಸ್ಕೃ ತ ವಿವಿಯ ಅಭಿನವ್ ಭಾರತಿ ಇಂಟರ್‌ನ್ಯಾಷನಲ್ ಸಂಕೀರ್ಣವನ್ನು ಭಾಗ್ವತ್ ಉದ್ಘಾಟಿಸಿದರು.
ನಿತ್ಯ ಬದುಕಲ್ಲಿ ಸಂಸ್ಕೃತ ಬಳಸಿ :
ಸಂಸ್ಕೃತ ಅರಿಯುವುದು ಒಂದು ಭಾಗವಾದರೆ ಸಂಸ್ಕೃ ತದಲ್ಲಿ ಸಂಭಾಷಣೆ ಮಾಡುವ ಸಾಮರ್ಥ್ಯ ಇನ್ನೊಂದು ಭಾಗ. ಇವೆರಡರಲ್ಲೂ ವ್ಯತ್ಯಾಸವಿದೆ. ಸಂಸ್ಕೃತ ವಿವಿಗೆ ಸರಕಾರದ ಕೃಪಾಶ್ರಯವಿರುತ್ತದೆ. ಆದರೆ ಜನರ ಬೆಂಬಲ ಕೂಡ ಅವಶ್ಯ. ಸಂಸ್ಥೆ ತ ದೇಶದ ಎಲ್ಲಾ ಭಾಷೆಗಳಿಗೆ ತಾಯಿಯಿದ್ದಂತೆ. ಆದರೆ ಈ ಭಾಷೆ ಇನ್ನಷ್ಟು ಬೆಳೆಯಬೇಕಾದರೆ ಜನರು ನಿತ್ಯ ಬದುಕಲ್ಲಿ ಈ ಭಾಷೆಯನ್ನು ಬಳಸಬೇಕು ಎಂದು ಅವರು ಸಲಹೆ ನೀಡಿದರು.
ಸಂಸ್ಕೃತದಲ್ಲಿ ಸಂವಹನ ಮುಖ್ಯ :
ನಿತ್ಯ ಬದುಕಿನಲ್ಲಿ ನಾವು ಸಂಸ್ಕೃ ತದಲ್ಲಿ ಸಂಭಾಷಿಸಬೇಕು. ನಿತ್ಯ ಬದುಕಿನ ಸಂವಹನ ಭಾಷೆಯಾಗಬೇಕು ವೇದಭಾಷೆ ಸಂಸ್ಥೆತ. ನಾನು ಸಂಸ್ಕೃತ ಕಲಿತಿದ್ದೇನೆ, ಆದರೆ ಸಂಸ್ಕೃತದಲ್ಲಿ ನಿರರ್ಗಳ ಮಾತನಾಡಲಾರೆ. ಸಂಸ್ಕೃತದಲ್ಲಿ ಸಂವಹನ ಅತ್ಯಗತ್ಯ ಮತ್ತು ಪ್ರತಿ ಮನೆ ಮನೆಗೂ ಈ ಭಾಷೆ ತಲುಪುವಂತಾಗಬೇಕು ಎಂದರು.

