ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಹಾವಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು ವ್ಯಸನ ಮುಕ್ತ ಭಾರತ’ ನಿರ್ಮಾಣಕ್ಕೆ ಜನತೆ ಮತ್ತು ಸಂಸ್ಥೆಗಳು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.
ಭಾನುವಾರ 112ನೇ ‘ಮನ್ ಕೀ ಬಾತ್’ ಆಕಾಶವಾಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಮ್ಮ ಮಕ್ಕಳು ಮಾದಕ ವಸ್ತುಗಳ ವಶವಾಗಬಹುದು ಎಂಬ ಹೆದರಿಕೆ ಪ್ರತಿ ಪರಿವಾರದಲ್ಲಿಯೂ ಇರುತ್ತದೆ. ಅಂಥವರ ಸಹಾಯಕ್ಕೆ ಸರ್ಕಾರ ‘ಮಾನಸ್’ ಹೆಸರಿನ ಕೇಂದ್ರ ತೆರೆದಿದ್ದು, ಡ್ರಗ್ಸ್ ವಿರುದ್ಧದ ಹೋರಾ ಟದಲ್ಲಿ ಇದು ದೊಡ್ಡ ಹೆಜ್ಜೆ’ ಎಂದರು.
ಇತ್ತೀಚೆಗೆ ಸರ್ಕಾರ ಬಿಡುಗಡೆಗೊಳಿಸಿದ ಡ್ರಗ್ಸ್ ಸಹಾಯವಾಣಿ 1933 ಸಂಖ್ಯೆಗೆ ಕರೆ ಮಾಡಿ ವ್ಯಸನದ ಬಗ್ಗೆ ಮಾಹಿತಿ ಅಥವಾ ಸಲಹೆ ಪಡೆಯಬೇಕು ಹಾಗೂ ಭಾರತವನ್ನು ವ್ಯಸನ ಮುಕ್ತ ಗೊಳಿಸಲು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮೋದಿ ಕರೆ ನೀಡಿದರು
ಮುಖ್ಯಮಂತ್ರಿ ಪರಿಷತ್ ಸಭೆ –
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ವಿಕಸಿತ ಭಾರತದ ಕನಸು ನನಸಾಗಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಪರಂಪರೆಯನ್ನು ಬೆಳೆಸುವುದು ಮತ್ತು ಅಭಿವೃದ್ಧಿಯ ಸಂಪ್ರದಾಯವನ್ನು ಬೆಳೆಸುವುದು ವಿಕಸಿತ ಭಾರತದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದೂ ಹೇಳಿದ್ದಾರೆ.
2 ದಿನಗಳ ‘ಮುಖ್ಯಮಂತ್ರಿ ಪರಿಷತ್ ಸಭೆಯಲ್ಲಿ ಬಿಜೆಪಿ ಆಡಳಿತದ ರಾಜ್ಯಗಳ 13 ಮುಖ್ಯಮಂತ್ರಿಗಳು ಮತ್ತು 15 ಉಪಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಭಾನುವಾರ ಮೋದಿ ಮಾತನಾಡಿದರು.