90
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಜಾರಿಗೆ ತಂದಿರುವ ವಲಸೆ ನೀತಿ ಖಂಡಿಸಿ ಲಾಸ್ ವಿಂಜಲೀಸ್‌ನಲ್ಲಿ ಕಳೆದ 6 ದಿನಗಳಿಂದ ಪ್ರತಿಭಟನೆ ಭುಗಿಲೆದ್ದಿದೆ ಅಮೆರಿಕದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಜನರು ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದು, ವಲಸಿಗರ ಪ್ರತಿಭಟನೆಯಿಂದಾಗಿ ಅಕ್ಷರಶ ಹೊತ್ತಿ ಉರಿಯುತ್ತಿದೆ.
ಅಕ್ರಮ ವಲಸಿಗರನ್ನು ಹುಡುಕಿ ಗಡಿಪಾರು ಮಾಡುವ ಟ್ರಂಪ್ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಹಿಂಸಾತ್ಮಕ ರೂಪ ಪಡೆದ ಪ್ರತಿಭಟನೆ ಕಾವು ಅಮೆರಿಕದ 12 ನಗರಗಳಿಗೆ ವ್ಯಾಪಿಸಿದ್ದು, ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇದೇ ವೇಳೆ ನೂರಾರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಹೀಗಿದ್ದರೂ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಿ ಶಾಂತಿ ಕಾಪಾಡಲು 4 ಸಾವಿರಕ್ಕೂ ಹೆಚ್ಚು ರಾಷ್ಟ್ರೀಯ ಪಡೆ ಸಿಬ್ಬಂದಿಯೊಂದಿಗೆ ನೌಕಾಪಡೆಯ 700 ತುಕಡಿಯನ್ನೂ ನಿಯೋಜಿಸಲಾಗಿದೆ.

