Home » ಟರ್ಕಿ ಡ್ರೋನ್‌ಗಳನ್ನು ಛಿದ್ರ ಛಿದ್ರಗೊಳಿಸಿದ ಸೇನೆ
 

ಟರ್ಕಿ ಡ್ರೋನ್‌ಗಳನ್ನು ಛಿದ್ರ ಛಿದ್ರಗೊಳಿಸಿದ ಸೇನೆ

by Kundapur Xpress
Spread the love

ನವದೆಹಲಿ : ಗುರುವಾರ ರಾತ್ರಿ ಭಾರತದ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಿದ್ದ ಪಾಕಿಸ್ತಾನ, ಈ ವೇಳೆ 3 ತಾಸಿನ ಅವಧಿಯಲ್ಲಿ ಟರ್ಕಿ ನಿರ್ಮಿತ 300-400 ಡೋನ್‌ಗಳನ್ನು ಭಾರತದತ್ತ ಹಾರಿಬಿಟ್ಟಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ರಾತ್ರಿ 8.00 ರಿಂದ 11.30ರ ನಡುವೆ ಏಕಕಾಲದಲ್ಲಿ ಭಾರತದ 36ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿಗೆ ಯತ್ನಿಸಲಾಗಿತ್ತು. ಆದರೆ ಈ ಪೈಕಿ 50ಕ್ಕೂ ಹೆಚ್ಚುಡೋನ್‌ಗಳನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿದ್ದರೆ, ಉಳಿದ ಮತ್ತೊಂದಿಷ್ಟನ್ನು ಜ್ಯಾಮ‌ರ್ ಬಳಸುವ ಮೂಲಕ ನಿಷ್ಕ್ರಿಯಗೊಳಿಸಲಾಗಿತ್ತು.

ಉಳಿದ ಡ್ರೋನ್‌ ಗಳೆಲ್ಲಾ ಬಹುತೇಕ ನಿಗಾ ಮತ್ತು ಮಾಹಿತಿ ಕಲೆಹಾಕುವ ಉದ್ದೇಶದಿಂದ ಬಂದಿದ್ದವು ಎಂದು ಭಾರತ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ. ಜೊತೆಗೆ, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ  ಕೂಡಾ ಶಸ್ತ್ರಸಜ್ಜಿತ ಡ್ರೋನ್‌ ಗಳನ್ನು ಹಾರಿಸಿ ಪಾಕಿಸ್ತಾನದ 4 ವಾಯುರಕ್ಷಣಾ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದೂ ತಿಳಿಸಿದೆ.

 

Related Articles

error: Content is protected !!