Home » ಆರ್‌ ಆರ್‌ ಟಿ ಎಸ್‌ ಕಾರಿಡಾರ್‌ ಉದ್ಘಾಟಿಸಿದ ಮೋದಿ ರೈಲಿನಲ್ಲಿ ಪ್ರಯಾಣ
 

ಆರ್‌ ಆರ್‌ ಟಿ ಎಸ್‌ ಕಾರಿಡಾರ್‌ ಉದ್ಘಾಟಿಸಿದ ಮೋದಿ ರೈಲಿನಲ್ಲಿ ಪ್ರಯಾಣ

by Kundapur Xpress
Spread the love

ಹೊಸದಿಲ್ಲಿ : ಉತ್ತರಪ್ರದೇಶದ ಸಾಹಿಬಾಬಾದ್‌ನಿಂದ ರಾಷ್ಟ್ರ ರಾಜಧಾನಿಯ ನ್ಯೂ ಅಶೋಕ್ ನಗರಕ್ಕೆ ಸಂಪರ್ಕ ಕಲ್ಪಿಸುವ ದಿಲ್ಲಿ-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆ‌ರ್.ಆರ್ ಟಿಎಸ್) ಕಾರಿಡಾರ್‌ನ 13 ಕಿಮೀ ವಿಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದಾರೆ

ನಂತರ ಸಾಹಿಬಾಬಾದ್ ನಿಲ್ದಾಣದಿಂದ ನ್ಯೂ ಅಶೋಕ್ ನಗರ ನಿಲ್ದಾಣದವರೆಗೆ ನಮೋ ಭಾರತ್ ರೈಲಿನಲ್ಲಿ ಮೋದಿ ಪ್ರಯಾಣಿಸಿದರು. ತಮ್ಮ ಪ್ರಯಾಣದ ವೇಳೆ ಪ್ರಧಾನಿಯವರು ಮಕ್ಕಳು ಸೇರಿದಂತೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.ಆರ್‌ಆರ್‌ಟಿಎಸ್‌ನ ದಿಲ್ಲಿ ವಿಭಾಗದ ಉದ್ಘಾಟನೆಯೊಂದಿಗೆ ನಮೋಭಾರತ್ ರೈಲುಗಳು ಈಗ ರಾಷ್ಟ್ರರಾಜಧಾನಿಗೆ ಆಗಮಿಸಿವೆ.

ನ್ಯೂ ಅಶೋಕ್ ನಗರ ಮತ್ತು ಮೀರತ್ ಸೌತ್ ನಡುವಿನ 55 ಕಿಮೀ ಆರ್ ಆರ್‌ಟಿಎಸ್ ಕಾರಿಡಾರ್ 11 ನಿಲ್ದಾಣಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಪ್ರಯಾಣಿಕರ ಕಾರ್ಯಾಚರಣೆಗಳು ಸಂಜೆ 5.00 ರಿಂದ ಪ್ರಾರಂಭವಾಗುತ್ತವೆ ಮತ್ತು ರೈಲುಗಳು ಪ್ರತಿ 15 ನಿಮಿಷಗಳಿಗೊಮ್ಮೆ ಲಭ್ಯವಿರುತ್ತವೆ. ಇದು ಸುಮಾರು 1ಲಕ್ಷ ಖಾಸಗಿ ವಾಹನಗಳ ಸಂಚಾರ ತಗ್ಗಿಸಿ ಕೋಟ್ಯಾಂತರ ರೂ.ಮೌಲ್ಯದ ತೈಲವನ್ನು ದೇಶಕ್ಕೆ ಉಳಿಸಲಿದ್ದು , ಪರಿಸರ ಮಾಲಿನ್ಯವನ್ನೂ ತಗ್ಗಿಸಲಿದೆ

 

Related Articles

error: Content is protected !!