ಹೊಸದಿಲ್ಲಿ : ದೇಶದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ ಬಗ್ಗೆ ಗಾಢ ಸಂತಾಪ ವ್ಯಕ್ತಪಡಿಸಿರುವ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಮತ್ತು ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಭಾರತಕ್ಕೆ ಡಾ. ಸಿಂಗ್ ಅವರ ಕೊಡುಗೆ ಸದಾ ಅವಿಸ್ಮರಣೀಯ ಎಂದಿದ್ದಾರೆ
ಮಾಜಿ ಪ್ರಧಾನಿ ಹಿರಿಯ ನಾಯಕ ಡಾ.ಮನಮೋಹನ್ ಸಿಂಗ್ ಅಗಲಿಕೆಯಿಂದ ಇಡೀ ದೇಶ ಶೋಕಸಾಗರದಲ್ಲಿ ಮುಳುಗಿದೆ. ಅವರ ಸಂತ್ರಸ್ತ ಕುಟುಂಬ ಮತ್ತು ಅಪಾರ ಪ್ರೀತಿಪಾತ್ರರು, ಅಭಿಮಾನಿಗಳೆಲ್ಲರಿಗೂ ಆರೆಸ್ಸೆಸ್ ಸಾಂತ್ವನ ಹೇಳಬಯಸುತ್ತದೆ ಎಂದು ಭಾಗ್ವತ್ ಮತ್ತು ಹೊಸಬಾಳೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯ ಕುಟುಂಬದ ಹಿನ್ನೆಲೆಯವರಾದರೂ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದರು ಡಾ.ಸಿಂಗ್. ಖ್ಯಾತ ಆರ್ಥಿಕ ತಜ್ಞರಾಗಿದ್ದ ಡಾ.ಸಿಂಗ್ ದೇಶಕ್ಕೆ ನೀಡಿದ್ದ ಕೊಡುಗೆ ಸದಾ ಸ್ಮರಣೀಯ. ಅವರ ಅಗಲಿದ ಆತ್ಮಕ್ಕೆ ದೇವರು ಸದ್ಗತಿ ಕರುಣಿಸಲೆಂದು ಪ್ರಾರ್ಥಿಸುತ್ತೇವೆ ಎಂದು ಆರೆಸ್ಸೆಸ್ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.