ಗುರುಗ್ರಾಮ : ಜಮ್ಮು ಕಾಶ್ಮೀರದ ಖ್ಯಾತ ರೇಡಿಯೋ ಜಾಕಿ ಸಿಮ್ರನ್ (25 ವರ್ಷ) ಗುರುವಾರ ಗುರುಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಲ್ಲಿನ ಸೆಕ್ಟರ್ 47ರ ತಮ್ಮ ಅಪಾರ್ಟ್ಮೆಂಟ್ ಕೋಣೆಯಲ್ಲಿ ಸಿಮ್ರನ್ರ ಶವ ಕಂಡು ಅವರ ಸ್ನೇಹಿತೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಸಿಮ್ರನ್ ಅವರು ಜಮ್ಮು ಕಾಶ್ಮೀರದ ನಿವಾಸಿಯಾಗಿದ್ದು ತಮ್ಮ ರೇಡಿಯೋ ಕಾರ್ಯಕ್ರಮದ ಮೂಲಕ ‘ಜಮ್ಮು ಕಿ ದಢಕನ್’ (ಜಮ್ಮುವಿನ ಹೃದಯಬಡಿತ) ಎಂದೇ ಖ್ಯಾತರಾಗಿದ್ದರು. ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.