ಹೊಸದಿಲ್ಲಿ : ಮಾಜಿ ಪ್ರಧಾನಿ ಡಾ.ಮನ ಮೋಹನ ಸಿಂಗ್ ಅಗಲಿಕೆ ಹಿನ್ನೆಲೆಯಲ್ಲಿ ಇಡೀ ದೇಶ 7 ದಿನಗಳ ಶೋಕಾ ಚರಣೆಯಲ್ಲಿ ಮುಳುಗಿರುವಂತೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಂಗ್ಲ ಹೊಸ ವರ್ಷಾಚರಣೆಗಾಗಿ ವಿಯೆಟ್ನಾಂಗೆ ಹಾರಿರುವುದು ತೀರಾ ವಿಪರ್ಯಾಸ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟೀಕಿಸಿದ್ದಾರೆ. ಸಿಖ್ ಸಮುದಾಯದ ಬಗ್ಗೆ ಕಾಂಗ್ರೆಸ್ ಗಾಂಧಿ ಕುಟುಂಬ ಪೂರ್ವಾಗ್ರಹ ಹೊಂದಿದೆ ಎಂದವರು ಎಕ್ಸ್ಗೆ ಹಾಕಿರುವ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ಡಾ.ಮನಮೋಹನ ಸಿಂಗ್ ಬಗ್ಗೆ ತಿರಸ್ಕಾರ ಭಾವ ಹೊಂದಿರುವ ರಾಹುಲ್ ಡಾ.ಸಿಂಗ್ ಅವರ ನಿಧನ ಅಂತ್ಯವಿಧಿ ವಿಚಾರಗಳನ್ನು ಬರೇ ತಮ್ಮ ಸಮಯ ಸಾಧಕ ರಾಜನೀತಿಗಾಗಿ ದುರ್ಬಳಸುತ್ತಿದ್ದಾರೆ ಮತ್ತು ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬಕ್ಕೆ ಸಿಬ್ಬರ ಬಗ್ಗೆ ತುಂಬು ದ್ವೇಷಾಸೂಯೆಯಿದೆ. ಕಾಂಗ್ರೆಸ್ ಮತ್ತು ಗಾಂಧಿಗಳು ಸಿಖ್ಖರ ದ್ವೇಷಿಗಳು, ಎಂದಿದ್ದಾರೆ.