Home » ಶಾಂಫೈ ಜಂಟಿ ಹೇಳಿಕೆಗೆ ಸಹಿ ಹಾಕಲು ನಿರಾಕರಿಸಿದ ಭಾರತ
 

ಶಾಂಫೈ ಜಂಟಿ ಹೇಳಿಕೆಗೆ ಸಹಿ ಹಾಕಲು ನಿರಾಕರಿಸಿದ ಭಾರತ

by Kundapur Xpress
Spread the love

ಚೀನಾ : ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಸ್ಪಷ್ಟ ನಿಲುವು ತಳೆಯದ ಶಾಂಫ್ಟ್ ಸಹಕಾರ ಸಂಘಟನೆಯ(ಎಸ್‌ ಸಿಒ) ಜಂಟಿ ಹೇಳಿಕೆಗೆ ಸಹಿ ಹಾಕಲು ಭಾರತ ನಿರಾಕರಿಸಿದೆ. ಈ ಮೂಲಕ ಚೀನಾದಲ್ಲಿ ನಿಂತು, ಪಾಕಿಸ್ತಾನ ಮತ್ತು ಅದನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಖಡಕ್ ಸಂದೇಶ ರವಾನಿಸಿದೆ.

ಭಾರತ ಸುದೀರ್ಘ ವರ್ಷಗಳಿಂದ ಎದುರಿಸುತ್ತಿರುವ ಗಡಿಯಾಚೆಯ ಭಯೋತ್ಪಾದನೆ ಸವಾಲನ್ನು ಗಂಭೀರ ಪರಿಗಣಿಸದಿರಲು ಮತ್ತು ಈ ವಿಚಾರವಾಗಿ ಆದ್ಯತೆಯಿಂದ ಚರ್ಚಿಸದಿರಲು ಶಾಂಫೈ ಸಹಕಾರ ಸಂಘಟನೆ (ಎಸ್‌ ಸಿಒ) ಸಮಾವೇಶ ನಿರ್ಧರಿಸಿದ್ದು, ಇದನ್ನು ವಿಶದಪಡಿಸುವ ದಾಖಲೆಗೆ ಸಹಿ ಹಾಕಲು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಭಯೋತ್ಪಾದನೆಯ ಪ್ರಚೋದಕರು ಮತ್ತು ಪೋಷಕರನ್ನು ಭಯೋತ್ಪಾದನೆ ಸೃಜಿಸುವ ಕ್ರೂರ ಪರಿಣಾಮಗಳಿಗೆ ಕಡ್ಡಾಯ ಹೊಣೆಗಾರರಾಗಿಸಬೇಕು ಎಂದು ಸಚಿವರು ಪ್ರತಿಪಾದಿಸಿದ್ದಾರೆ

 

Related Articles

error: Content is protected !!