ಮೋವ್ (ಮಧ್ಯಪ್ರದೇಶ ) : ಕಳೆದೊಂದು ದಶಕದಲ್ಲಿ ದೇಶದ ರಕ್ಷಣಾ ರಫ್ತು ಪ್ರಮಾಣ ದಾಖಲೆಯ 21 ಸಾವಿರ ಕೋಟಿ ರೂ. ಮೀರಿದೆ. ದಶಕದ ಹಿಂದೆ ಈ ಪ್ರಮಾಣ ಕೇವಲ 2 ಸಾವಿರ ಕೋಟಿ ರೂ.ಗಳಿಗೆ ಸೀಮಿತವಿತ್ತು. 2029ರಲ್ಲಿ 50,000 ಕೋಟಿ ರೂ.ಗಳ ರಕ್ಷಣಾ ರಫ್ತು ಸಾಧಿಸುವ ಗುರಿ ಹೊಂದಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ನಿರಂತರ ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಮುಂಚೂಣಿ ಆಧುನಿಕ ತಂತ್ರಜ್ಞಾನಗಳಲ್ಲಿ ಯೋಧರು ನಿಷ್ಣಾತರಾಗುವುದು ತೀರಾ ಅಗತ್ಯ. ಈ ನಿಟ್ಟಿನಲ್ಲಿ ಭಾವೀ ಸವಾಲುಗಳನ್ನು ಎದುರಿಸಲು ಯೋಧರನ್ನು ಸಜ್ಜುಗೊಳಿಸುವಲ್ಲಿ ಮಿಲಿಟರಿ ತರಬೇತಿ ಕೇಂದ್ರಗಳು ನಿರ್ಣಾಯಕ ಪಾತ್ಶರ ವಹಿಸುತ್ತದೆ ಎಂದು ಸಚಿವರು ನೆಮ್ಮದಿ ಪಕ್ತಪಡಿಸಿದರು. ಶಮಾನಗಳಿಗೂ ಹಳೆಯ ಮೋವ್ ಕಂಟೋನ್ವೆಂಟ್‌ನಲ್ಲಿನ ಆರ್ಮಿ ವಾರ್ ಕಾಲೇಜ್‌ನಲ್ಲಿ(ಎಡಬ್ಲ್ಯೂಸಿ) ಸೋಮವಾರ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು
ಭಾರೀ ಸವಾಲುಗಳು:
ಭಾರತದಲ್ಲಿ ನಿರ್ಮಿತ ಯುದ್ಧೋಪಕರಣಗಳೀಗ ಇತರ ರಾಷ್ಟ್ರಗಳಿಗೆ ರಫ್ತಾಗುತ್ತಿವೆ. ಸಮರತಂತ್ರಗಳಲ್ಲೂ ಮಾರ್ಪಾಡುಗಳಾಗಿವೆ. ಭಾರೀ ಅಸಾಂಪ್ರದಾಯಿಕ ವಿಧಾನಗಳಾದ ಮಾಹಿತಿ ಸಮರ ತಂತ್ರ, ಕೃತಕ ಬುದ್ಧಿಮತ್ತೆ ಆಧಾರಿತ ಸಮರಕಲೆ, ಅಣಕು ಯುದ್ಧತಂತ್ರ, ಇಲೆಕ್ಟೋ ಮ್ಯಾಗ್ನೆಟಿಕ್ ಸಮರತಂತ್ರ, ಬಾಹ್ಯಾಕಾಶ ಸಮರತಂತ್ರ, ಸೈಬರ್ ದಾಳಿಗಳು ಭಾರೀ ಸವಾಲುಗಳಾಗಿ ಪರಿಣಮಿಸಿವೆ. ಇಂತಹ ತೀರಾ ಅತ್ಯಾಧುನಿಕ ಸಮರತಂತ್ರ ಆಧಾರಿತ ದಾಳಿಗಳ ಎದುರಿಸಲು ನಮ್ಮ ಮಿಲಿಟರಿ ಸಜ್ಜಾಗುವುದು ಅನಿವಾರ್ಯ ಮತ್ತು ಮೋವ್ ನಲ್ಲಿರುವ ತರಬೇತಿ ಕೇಂದ್ರ ಈ ನಿಟ್ಟಿನಲ್ಲಿ ಮೌಲ್ಯಯುತ ಕೊಡುಗೆಗಳ ನೀಡುತ್ತಿದೆ ಎಂದರು.