Home » ದುಷ್ಕೃತ್ಯಕ್ಕಾಗಿ ಭಯೋತ್ಪಾದಕರ ಹತ್ಯೆ
 

ದುಷ್ಕೃತ್ಯಕ್ಕಾಗಿ ಭಯೋತ್ಪಾದಕರ ಹತ್ಯೆ

ರಾಜ್‌ನಾಥ್‌ ಸಿಂಗ್

by Kundapur Xpress
Spread the love

ಜೋಧಪುರ : ಭಾರತೀಯ ಪಡೆಗಳು ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿವೆ. ಭಯೋತ್ಪಾದಕರು ನಮ್ಮ ಜನರನ್ನು ಅವರ ಧರ್ಮವನ್ನು ಗುರುತಿಸಿ ಬರ್ಬರವಾಗಿ ನರಮೇಧವೆಸಗಿದರು. ಆದರೆ ನಮ್ಮ ಯೋಧರೆಂದೂ ಭಯೋತ್ಪಾದಕರನ್ನು ಅವರ ಮತ ಪರಿಗಣಿಸದೆ ಕೇವಲ ಅವರ ಕುಕೃತ್ಯಗಳಿಗಾಗಿ ಅವರ ವಿರುದ್ದ ಕ್ರಮ ಕೈಗೊಂಡರು ಎಂಬುದನ್ನು ನಾವು ಗಮನಿಸಬೇಕೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಕ್ರೀಡಾ ಅಕಾಡೆಮಿಯೊಂದರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಕೈಗೊಳ್ಳಲಾದ ಸೇನಾ ಕಾರ್ಯಾಚರಣೆಯ ವೇಳೆ ಗಡಿ ಭಾಗದ ಜನರು ಸರ್ಕಾರ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ನೀಡಿದ ಬೆಂಬಲವನ್ನು ಅವರು ಶ್ಲಾಘಿಸಿದರು. 

 

Related Articles

error: Content is protected !!