77
ಹೊಸದಿಲ್ಲಿ : ನಟ ಕಮಲ ಹಾಸನ್ ಶುಕ್ರವಾರ ರಾಜ್ಯಸಭೆಯ ಸದಸ್ಯರಾಗಿ ತಮಿಳಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಈ ರಾಜಕೀಯ ಮೈಲಿಗಲ್ಲಿನಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಕಮಲ ಹಾಸನ್, ಮೇಲ್ಮನೆಯಲ್ಲಿ ಸೇವೆ ಸಲ್ಲಿಸಲು ತಮಗೆ ಹೆಮ್ಮೆಯಿದೆ ಎಂದು ಹೇಳಿದರು.
ಜೂ.12ರಂದು ಡಿಎಂಕೆ ಮೈತ್ರಿ ಕೂಟದಿಂದ ಕಮಲ ಹಾಸನ್ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಆಗಿದ್ದರು. ಪ್ರಮಾಣ ವಚನ ಸಮಾರಂಭಕ್ಕೆ ಮುನ್ನ ಕಮಲ್ ಹಾಸನ್, ನಾನು ದಿಲ್ಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ನನ್ನ ಹೆಸರನ್ನು ನೋಂದಾಯಿಸಿಕೊಳ್ಳಲಿದ್ದೇನೆ. ಒಬ್ಬ ಭಾರತೀಯನಾಗಿ ನನಗೆ ನೀಡಲಾದ ಗೌರವದೊಂದಿಗೆ ನಾನು ಈ ಕರ್ತವ್ಯ ಪೂರೈಸಲಿದ್ದೇನೆ ಎಂದು ಹೇಳಿದರು.

