Home » ಇಂದು ಮೋದಿ ತಮಿಳುನಾಡಿಗೆ
 

ಇಂದು ಮೋದಿ ತಮಿಳುನಾಡಿಗೆ

ವಿವಿಧ ಯೋಜನೆಗೆ ಚಾಲನೆ

by Kundapur Xpress
Spread the love

ಹೊಸದಿಲ್ಲಿ : ಇಂಗ್ಲೆಂಡ್ ಮತ್ತುಮಾಲ್ಡೀವ್ಸ್‌ ಪ್ರವಾಸ ಮುಗಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ತಮಿಳು ನಾಡಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು 4800 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜ ನೆಗೆ ಚಾಲನೆ ನೀಡಲಿದ್ದಾರೆ.

ಭಾನುವಾರ (ಜು.27) ಮೋದಿ ಚೋಳ ಸಾಮ್ರಾಜ್ಯದ ಪ್ರಸಿದ್ಧ ರಾಜ ರಾಜೇಂದ್ರ ಚೋಳ  ಅವರ ಜನ್ಮ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರಾದೇಶಿಕ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುವ, ಲಾಜಿಸ್ಟಿಕ್ಸ್ ದಕ್ಷತೆ ಹೆಚ್ಚಿಸುವ, ಶುದ್ಧ ಇಂಧನ ಮೂಲಸೌಕರ್ಯ ಬಲಪಡಿಸುವ ಮತ್ತು ತಮಿಳುನಾಡಿನಾದ್ಯಂತ ನಾಗರಿಕರ ಜೀವನದ ಗುಣಮಟ್ಟ ಸುಧಾರಿಸುವ ಹಲವು ವಲಯಗಳಲ್ಲಿನ ಹೆಗ್ಗುರುತು ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.

 

Related Articles

error: Content is protected !!