Home » ಜೂನ್‌ಗೆ ರಾಮಮಂದಿರ ಪೂರ್ಣ : ಮಿಶ್ರಾ
 

ಜೂನ್‌ಗೆ ರಾಮಮಂದಿರ ಪೂರ್ಣ : ಮಿಶ್ರಾ

by Kundapur Xpress
Spread the love

ಅಯೋಧ್ಯೆ : ಬರೋಬ್ಬರಿ 497 ವರ್ಷಗಳ ಕಾಯುವಿಕೆಯ ನಂತರ ಅಯೋಧ್ಯೆಯ ಪುಣ್ಯ ನೆಲವಾದ ರಾಮ ಜನ್ಮಭೂಮಿಯಲ್ಲಿ ಭವ್ಯವಾದ ಮಂದಿರವು ಜೂನ್‌ಗೆ ಪೂರ್ಣಗೊಳ್ಳಲಿದೆ. ಮಂಗಳವಾರ ಮಂದಿರದ ಶಿಖರದ ಮೇಲೆ ಬೃಹತ್ ಧರ್ಮ ಧ್ವಜಸ್ತಂಭ ಸ್ಥಾಪಿಸಲಾಗಿದೆ.

ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮ ಮಂದಿರ ನಿರ್ಮಾಣ ಕಾರ್ಯವು ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ‘ಜನ್ಮಭೂಮಿ ರಾಮ ಮಂದಿರದ ನಿರ್ಮಾಣ ಕಾರ್ಯವು 2020ರಲ್ಲಿ ಪ್ರಾರಂಭವಾಯಿತು. ಅದೀಗ ಅಂತಿಮ ಹಂತದಲ್ಲಿದೆ. ಮಂದಿರದ ಗರ್ಭಗುಡಿ ಮತ್ತು ಮಂದಿರ ರಚನೆಯು ಈಗಾಗಲೇ ಪೂರ್ಣಗೊಂಡಿದೆ. ಈಗ ಬಾಹ್ಯ ನೋಟವನ್ನು ಅಂತಿಮಗೊಳಿಸಲಾಗುತ್ತಿದೆ.

ಮಂಗಳವಾರ ಬೆಳಗ್ಗೆ ಮಂದಿರದ ಶಿಖರದ ಮೇಲೆ ಧ್ವಜಸ್ತಂಭವನ್ನು ಸ್ಥಾಪಿಸಲಾಯಿತು. ಈ ಪವಿತ್ರ ಕಾರ್ಯವು ವೇದ ಪಠಣ ಮತ್ತು ವಿಶೇಷ ಪ್ರಾರ್ಥನೆಗಳೊಂದಿಗೆ ಪೂರ್ಣಗೊಂಡಿತು. ಮುಂಜಾನೆ 6.30 ರ ಸುಮಾರಿಗೆ ಎಂಜಿನಿಯರ್‌ಗಳು 160 ಅಡಿ ಎತ್ತರದ ಶಿಖರದ ಮೇಲಿದ್ದರು. ಅಲ್ಲಿ 2 ಕ್ರೇನ್ ಗಳ ಸಹಾಯದಿಂದ ಧ್ವಜಸ್ತಂಭವನ್ನು ಟ್ರಾಲಿಯ ಮೇಲಿನಿಂದ ಮೇಲಕ್ಕೆತ್ತಲಾಯಿತು

 

Related Articles

error: Content is protected !!