109
ನವದೆಹಲಿ : ಆಜೀವ ಪರ್ಯಂತ ರಾಜಕೀಯದಲ್ಲಿರಬೇಕು ಎಂದು ಆಸೆ ಪಡುವವರ ನಡುವೆ ಕೇಂದ್ರ ಸಚಿವ ಅಮಿತ್ ಶಾ ಅವರು ತಮ್ಮ ನಿವೃತ್ತಿ ಬಳಿಕದ ಜೀವನವನ್ನು ವೇದ, ಉಪನಿಷತ್ ಮತ್ತು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಸಹ ಕಾರ್ ಸಂವಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ನನ್ನ ನಿವೃತ್ತಿ ಜೀವನದ ಬಗ್ಗೆ ಯೋಚಿಸಿದ್ದೇನೆ. ರಾಜಕೀಯದಿಂದ ನಿವೃತ್ತಿ ಪಡೆದ ಬಳಿಕ ಮುಂದಿನ ಜೀವನವನ್ನು ವೇದಗಳ ಪಠಣ, ಉಪನಿಷತ್ ಪಾರಾಯಣ ಮತ್ತು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದಿದ್ದಾರೆ.

