ಹೊಸದಿಲ್ಲಿ : ದೇಶದಲ್ಲಿ ಉತ್ತಮ ಆಡಳಿತ ಸ್ಥಾಪಿಸಲು ಒಂದು ದೇಶ ಒಂದು ಚುನಾವಣೆ ಪೂರಕವಾದುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಪ್ರತಿಪಾದಿಸಿದರು.
76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರ ವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಆಡಳಿತದಲ್ಲಿ ಸ್ಥಿರತೆ ಉತ್ತೇಜಿಸುವುದರೊಂದಿಗೆ, ಸಂಪನ್ಮೂಲಗಳ ದುರ್ಬಳಕೆ ತಗ್ಗಿಸಿ ರಾಜ್ಯದ ಮೇಲಿನ ಆರ್ಥಿಕ ಹೊರೆಗಳನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ಉತ್ತಮ ಆಡಳಿತವನ್ನು ಮರು ಸ್ಥಾಪಿಸುವ ಸಾಮರ್ಥ್ಯವನ್ನು ಒಂದು ರಾಷ್ಟ್ರ ಒಂದು ಚುನಾವಣೆ ಹೊಂದಿದೆ ಎಂದರು.
ದಶಕಗಳಿಂದ ದೇಶದಲ್ಲಿ ಉಳಿದುಕೊಂಡಿರುವ ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕಲು ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು.
ವಸಾಹತುಶಾಹಿ ಮನಸ್ಥಿತಿ ಬದಲಾಯಿಸಲು ‘ನಾವು ಸಂಘಟಿತ ಪ್ರಯತ್ನಗಳನ್ನು ನೋಡುತ್ತಿದ್ದೇವೆ. ಒಂದು ರಾಷ್ಟ್ರ ಒಂದು ಚುನಾವಣೆ ಸುಧಾರಿತ ಆಡಳಿತ ಮತ್ತು ಕಡಿಮೆ ಆರ್ಥಿಕ ಒತ್ತಡ ಸೇರಿ ಹಲವು ಪ್ರಯೋಜನ ನೀಡುತ್ತದೆ ಎಂದರು