Home » ಎಬಿವಿಪಿಯಿಂದ ದಿಲ್ಲಿ ಗದ್ದುಗೆ ಏರಿದ ರೇಖಾ ಗುಪ್ತಾ
 

ಎಬಿವಿಪಿಯಿಂದ ದಿಲ್ಲಿ ಗದ್ದುಗೆ ಏರಿದ ರೇಖಾ ಗುಪ್ತಾ

by Kundapur Xpress
Spread the love

ನವದೆಹಲಿ : ಇತ್ತೀಚಿನ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿ ಶಾಸಕಿಯಾಗಿ ಆಯ್ಕೆ ಆಗಿದ್ದ ರೇಖಾ ಗುಪ್ತಾಗೆ ದಿಲ್ಲಿ ಸಿಎಂ ಸ್ಥಾನ ಅಚ್ಚರಿಯ ರೀತಿಯಲ್ಲಿ ಒಲಿದುಬಂದಿದೆ.

ಶಾಸಕರಾಗುವ ಮೊದಲು ಅವರು ದಿಲ್ಲಿ ಮಹಾನಗರ ಪಾಲಿಕೆ ಕೌನ್ಸಿಲ‌ರ್ ಆಗಿದ್ದರು. ಎಬಿವಿಪಿ ಪ್ರಧಾನ ಕಾರ್ಯದರ್ಶಿ ಮತ್ತು ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ವಿದ್ಯಾರ್ಥಿ ಜೀವನದಲ್ಲಿ ಕೆಲಸ ಮಾಡಿದ್ದರು. ಬಿಜೆಪಿ ಸೇರಿದ ನಂತರ ಹಂತ ಹಂತವಾಗಿ ರಾಜಕೀಯ ಮೆಟ್ಟಿಲು ಏರಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿದ್ದರು ಮತ್ತು ಪಕ್ಷದ ದೆಹಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಮದುವೆಯ ನಂತರವೂ ರೇಖಾ ಗುಪ್ತಾ ರಾಜಕೀಯದಿಂದ ದೂರ ಉಳಿಯಲಿಲ್ಲ. 2007ರಲ್ಲಿ, ಅವರು ಉತ್ತರ ಪೀತಂಪುರ ದಿಂದ ಕೌನ್ಸಿಲರ್‌ಆಗಿ ಆಯ್ಕೆಯಾದರು. 2025ರಲ್ಲಿ ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಅವರು ಶಾಲಿಮಾರ್ ಬಾಗ್ ನಿಂದ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ

 

Related Articles

error: Content is protected !!