153
ನ್ಯೂಯಾರ್ಕ್ : ಅದಾನಿ ಸಮೂಹದ ಉದ್ಯಮಿಗಳಾದ ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಅವರ ಮೇಲಿನ ಸೌರ ವಿದ್ಯುತ್ ಗುತ್ತಿಗೆ ಅಕ್ರಮಕ್ಕೆ ಸಂಬಂಧಿ ಸಿದಂತೆ ತನಿಖೆ ನಡೆಸುತ್ತಿರುವ ಅಮೆರಿಕ ಷೇರುಪೇಟೆ ಆಯೋಗ, ‘ನಾವು ಹಾಕಿರುವ ಕೇಸಿನ ವಿಷಯವನ್ನು ಅದಾನಿ ಜತೆ ಹಂಚಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ’ ಎಂದು ಹೇಳಿದೆ. ಅಲ್ಲದೆ, ಇದಕ್ಕೆ ಸಹಕಾರ ಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದಿದೆ. ಅಮೇರಿಕದ ನ್ಯೂಯಾರ್ಕ್ ಕೋರ್ಟ್‌ಗೆ ಸಲ್ಲಿಸಲಾದ ವಸ್ತುಸ್ಥಿತಿ ವರದಿಯಲ್ಲಿ ಅದು ಈ ಮಾಹಿತಿ ನೀಡಿದೆ. ಅದಾನಿ ಭಾರತದಲ್ಲಿ ಸೌರ ವಿದ್ಯುತ್ ಗುತ್ತಿಗೆ ಪಡೆಯಲು ಲಂಚ ನೀಡಿದ್ದರು. ಆದರೆ ಈ ವಿಷಯ ಮುಚ್ಚಿಟ್ಟು ಅಮೆರಿಕ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರು ಎಂಬ ತನಿಖೆಯನ್ನು ಅಮೆರಿಕ ಷೇರುಪೇಟೆ ಆಯೋಗ ನಡೆಸುತ್ತಿದೆ.

