Home » ಭಾರತಕ್ಕೆ ಟ್ರಂಪ್‌ ಬೆದರಿಕೆ ಕಾನೂನು ಬಾಹಿರ : ರಷ್ಯಾ
 

ಭಾರತಕ್ಕೆ ಟ್ರಂಪ್‌ ಬೆದರಿಕೆ ಕಾನೂನು ಬಾಹಿರ : ರಷ್ಯಾ

ಬಯಸಿದವರ ಜೊತೆ ವ್ಯಾಪಾರೆ ಎಲ್ಲರ ಹಕ್ಕು

by Kundapur Xpress
Spread the love

ಮಾಸ್ಕೊ : ರಷ್ಯಾದಿಂದ ತೈಲ ಆಮದು ನಿಲ್ಲಿಸದಿದ್ದರೆ ಭಾರತದ ಮೇಲಿನ ತೆರಿಗೆಯನ್ನು ಇನ್ನಷ್ಟು ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೊಂದು ಬೆದರಿಕೆ ಹಾಕಿದ ಬೆನ್ನಲ್ಲೇ, ಇದೇ ಮೊದಲ ಬಾರಿಗೆ ರಷ್ಯಾ ಅಮರಿಕಕ್ಕೆ ತಿರುಗೇಟು ನೀಡಿದೆ. ‘ಇತರ ದೇಶಗಳಿಗೆ ರಷ್ಯಾದ ಜೊತೆ ವ್ಯಾಪಾರ ನಿಲ್ಲಿಸುವಂತೆ ಒತ್ತಡ ಹೇರುವುದು ಕಾನೂನುಬಾಹಿರ ಮಾತ್ರವಲ್ಲ, ಇದನ್ನು ಬೆದರಿಕೆ ಎಂದು ಪರಿಗಣಿಸಲಾಗುತ್ತದೆ’ ಎಂದು ಕಿಡಿಕಾರಿದೆ.

ಸುದ್ದಿಗಾರರ ಜತೆ ಮಾತನಾಡಿದ ರಷ್ಯಾ ಅಧ್ಯಕ್ಷರ ಕಚೇರಿ ವಕ್ತಾರ ಡಿಮಿಟ್ರಿ ಪೆಸ್ಕೊ, ರಷ್ಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ನಿಲ್ಲಿಸುವಂತೆ ಇತರ ದೇಶಗಳಿಗೆ ಬೆದರಿಕೆ ಒಡ್ಡುವ ಹಲವು ಹೇಳಿಕೆಗಳನ್ನು ಕೇಳಿದ್ದೇವೆ. ಅಂಥ ಹೇಳಿಕೆಗಳು ನ್ಯಾಯಬದ್ದ ಎಂದು ನಾವು ಪರಿಗಣಿಸುವುದಿಲ್ಲ. ತಮ್ಮ ವ್ಯಾಪಾರ ಪಾಲುದಾರರು, ಆರ್ಥಿಕ ಸಹಯೋಗ ಹಾಗೂ ವ್ಯಾಪಾರ-ಆರ್ಥಿಕ ಸಹಯೋಗದ ವಿಧವನ್ನು ಆಯ್ದುಕೊಳ್ಳುವ ಹಕ್ಕನ್ನು ಸಾರ್ವಭೌಮ ರಾಷ್ಟ್ರಗಳು ಹೊಂದಿದೆ ಮತ್ತು ಹೊಂದಬೇಕು ಎಂದು ನಾವು ನಂಬುತ್ತೇವೆ ಎಂದಿದ್ದಾರೆ

 

Related Articles

error: Content is protected !!