ನವದೆಹಲಿ : ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ಸ್ವೀಕಾರ ಕಾರ್ಯಕ್ರಮಕ್ಕೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಪ್ರಧಾನಿ ನರೇಂದ್ರ ಮೋದಿ ಅವರು ಕಳಿಸಿರುವ ಪತ್ರ ಸಂದೇಶವನ್ನು ಟ್ರಂಪ್ಗೆ ತಲುಪಿಸಿದ್ದಾರೆ. ಆದರೆ ಸಂದೇಶದಲ್ಲೇನಿದೆ ಎಂಬ ವಿವರ ಲಭಿಸಿಲ್ಲ
ದೇಶದ ಅಥವಾ ಸರ್ಕಾರದ ಮುಖ್ಯಸ್ಥರ ಪದಗ್ರಹಣ ಸಮಾರಂಭಕ್ಕೆ ಭಾರತದ ಪ್ರತಿನಿಧಿಗಳನ್ನು ಕಳುಹಿಸುವ ಸಂಪ್ರದಾಯದ ಭಾಗವಾಗಿ ಜೈಶಂಕರ್ ಅವರನ್ನು ಅಮೆರಿಕಕ್ಕೆ ಕಳಿಸಲಾಗಿದೆ.
ಟ್ರಂಪ್ ಪ್ರಮಾಣಕ್ಕೆ ಬಂದಿದ್ದು ಸುಯೋಗ
– ಜೈಶಂಕರ್
‘ಟ್ರಂಪ್ರ ಪ್ರಮಾಣ ಸಮಾರಂಭದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸುತ್ತಿರುವುದು ನನ್ನ ಸುಯೋಗ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು ವಿದೇಶಾಂಗ ಸಚಿವ ಹಾಗೂ ಪ್ರಧಾನಿಯವರ ಪ್ರತಿನಿಧಿಯಾಗಿ ಅಮೆರಿಕದ 47ನೇ ಅಧ್ಯಕ್ಷರ ಶಪಥ ಸಮಾರಂಭದಲ್ಲಿ ಭಾಗವಹಿಸುತ್ತಿ ರುವುದು ನನ್ನ ಸುಯೋಗ. ಬೆಳಗ್ಗೆ ಸಂತ ಜಾನ್ ಚರ್ಚ್ನಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿದೆ’ ಎಂದು ಬರೆದುಕೊಂಡಿದ್ದಾರೆ.