Home » ಸಾಬರಮತಿ ರಿಪೋರ್ಟ್‌ ಚಿತ್ರ ವೀಕ್ಷಿಸಿದ ಮೋದಿ
 

ಸಾಬರಮತಿ ರಿಪೋರ್ಟ್‌ ಚಿತ್ರ ವೀಕ್ಷಿಸಿದ ಮೋದಿ

by Kundapur Xpress
Spread the love

ನವದೆಹಲಿ : 2002ರಲ್ಲಿ ಗುಜರಾತಿನ ಗೋಧ್ರಾದಲ್ಲಿ ನಡೆದ ಗಲಭೆಯ ಕುರಿತಾದ ನೈಜ ಅಂಶಗಳನ್ನು ಆಧರಿಸಿದ ‘ಸಾಬರಮತಿ ರಿಪೋರ್ಟ್’ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ವೀಕ್ಷಿಸಿದರು.

ಬಾಲಯೋಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಅಮಿತ್ ಶಾ. ಜೆ.ಪಿ. ನಡ್ಡಾ, ಸಂಸದೀಯ ಖಾತೆ ಪ್ರಹ್ಲಾದ್ ಜೋಶಿ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಮೋದಿಗೆ ಸಾಥ್ ನೀಡಿದರು

ಚಿತ್ರ ವೀಕ್ಷಣೆಯ ಬಳಿಕ ಈ ಕುರಿತು ಮೋದಿ ಟ್ವಿಟ್ ಮಾಡಿ ಎನ್‌ಡಿಎ ನಾಯಕರ ಜತೆ ಸಿನಿಮಾ ವೀಕ್ಷಿಸಿದೆ. ಚಿತ್ರದ ನಿರ್ಮಾಪಕರ ಪ್ರಯತ್ನಕ್ಕಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ’ ಎಂದಿದ್ದಾರೆ.

ಧೀರಜ್ ಸರ್ನಾ ನಿರ್ದೇಶನದ ಈ ಚಿತ್ರದಲ್ಲಿ ವಿಕ್ರಾಂತ್ ಮೈಸಿ, ರಿಧಿ ದೋಗ್ರಾ, ರಾಶಿ ಖನ್ನಾ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿಜೆಪಿ ಆಡಳಿತದ ಹಲವು ರಾಜ್ಯಗಳು ಈಗಾಗಲೇ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿವೆ.

 

Related Articles

error: Content is protected !!