Home » ಜ್ಞಾನ ಅಭಿವ್ಯಕ್ತಿಗೆ ಸಂಸ್ಕ್ರತ ಭಾಷೆ ಆಧ್ಯಾತ್ಮಿಕ ಮೂಲ
 

ಜ್ಞಾನ ಅಭಿವ್ಯಕ್ತಿಗೆ ಸಂಸ್ಕ್ರತ ಭಾಷೆ ಆಧ್ಯಾತ್ಮಿಕ ಮೂಲ

by Kundapur Xpress
Spread the love

ಹೊಸದಿಲ್ಲಿ : ಅತ್ಯಂತ ಪ್ರಾಚೀನವಾದ ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ಸರ್ಕಾರ ಕಳೆದ ದಶಕದಲ್ಲಿ ತನ್ನ ನೇತೃತ್ವದ ಹಲವು ಪ್ರಯತ್ನಗಳನ್ನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜ್ಞಾನ ಮತ್ತು ಅಭಿವ್ಯಕ್ತಿಗೆ ಸಂಸ್ಕೃತ ಆಧ್ಯಾತ್ಮಿಕ ಮೂಲವಾಗಿದೆ. ಪ್ರತಿಯೊಂದು ರಂಗದಲ್ಲೂ ಈ ಹಿರಿಯ ಭಾಷೆಯ ಪ್ರಭಾವವನ್ನು ಕಾಣಬಹುದು ಎಂದವರು ವಿಶ್ವ ಸಂಸ್ಕೃ ತ ದಿನಾಚರಣೆಗೆ ತಮ್ಮ ಸಂದೇಶದಲ್ಲಿ ನುಡಿದಿದ್ದಾರೆ. ವರ್ಷವೂ ಶ್ರಾವಣ ಪೂರ್ಣಿಮೆಯಂದು ವಿಶ್ವ ಸಂಸ್ಕೃತ ದಿನಾಚರಣೆ ಸಂಪನ್ನಗೊಳ್ಳುತ್ತದೆ.

ಸಂಸ್ಕೃತ ಕಲಿಯಲು ಮತ್ತು ಮಾತೃಸಮಾನವಾದ ಈ ಭಾಷೆಯ ಜನಪ್ರಿಯತೆಗೆ ಪ್ರಯತ್ನಿಸುವವರ ಪ್ರಯತ್ನಗಳ ಕೊಂಡಾಡಲು ಇದು ಸಕಾಲವೆಂದ ಪ್ರಧಾನಿ ಮೋದಿ, ಸಂಸ್ಕೃತವನ್ನು ಜನಪ್ರಿಯಗೊಳಿಸಲು ಸರಕಾರ ಕೇಂದ್ರೀಯ ಸಂಸ್ಕೃತ ವಿವಿ ಸ್ಥಾಪಿಸಿದೆ, ಸಂಸ್ಕೃತ ಕಲಿಕಾ ಕೇಂದ್ರಗಳನ್ನು ತೆರೆದಿದೆ, ಸಂಸ್ಕೃತ ಪಂಡಿತರಿಗೆ ಅನುದಾನ ನೀಡುತ್ತಿದೆ, ಪ್ರಾಚೀನ ಸಂಸ್ಕೃತ ಗ್ರಂಥಗಳ ಡಿಜಿಟಲೀಕರಣ ವ್ಯವಸ್ಥೆಗೆ ನಾಂದಿ ಹಾಡಿದೆ. ಇದು ಅದೆಷ್ಟೋ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಸಂಶೋಧಕರ ಪಾಲಿಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

 

Related Articles

error: Content is protected !!