Home » ಎಲ್ಲರನ್ನೂ ಸ್ವೀಕರಿಸುವುದೇ ಹಿಂದು ಧರ್ಮ
 

ಎಲ್ಲರನ್ನೂ ಸ್ವೀಕರಿಸುವುದೇ ಹಿಂದು ಧರ್ಮ

ಮೋಹನ್‌ ಭಾಗ್ವತ್

by Kundapur Xpress
Spread the love

ಕೊಚ್ಚಿ : ಎಲ್ಲರನ್ನು ಅಪ್ಪಿಕೊಳ್ಳುವುದರಲ್ಲಿ ಹಿಂದು ಧರ್ಮದ ಸಾರ ಅಡಗಿದೆ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ್ ಮೋಹನ್ ಭಾಗ್ವತ್ ಅವರು ಪ್ರತಿಪಾದಿಸಿದ್ದಾರೆ.

ಆರ್‌ಎಸ್‌ಎಸ್‌ನ ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಆಯೋಜಿಸಿರುವ ರಾಷ್ಟ್ರೀಯ ಶಿಕ್ಷಣ ಸಮ್ಮೇಳನದ ಜ್ಞಾನಸಭಾದಲ್ಲಿ ಮತನಾಡಿದ ಮೋಹನ್ ಭಾಗ್ವತ್ ಅವರು, ಕಟ್ಟಾ ಹಿಂದು ಆಗಿರುವುದು ಎಂದರೆ ಇತರರನ್ನು ವಿರೋಧಿಸುವುದು ಎಂದರ್ಥವಲ್ಲ ಎಂದೂ ಹೇಳಿದ್ದಾರೆ.  ನಿಜವಾದ ಹಿಂದು ಆಗಿರುವುದು ಎಂದರೆ ಬೇರೆಯವರನ್ನು ವಿರೋಧಿಸುವುದು ಎಂದರ್ಥವಲ್ಲ. ಆದರೆ ಹಿಂದು ಆಗಿರುವುದರ ಸಾರವೆಂದರೆ ಎಲ್ಲರನ್ನೂ ಅಪ್ಪಿಕೊಳ್ಳುವುದು  ಎಂದು ಭಾಗ್ವತ್ ಹೇಳಿದರು.

ಹಿಂದುಗಳನ್ನು ಒಗ್ಗೂ ಡಿಸಲು ಬಯಸುವ ಎಲ್ಲರೂ ಈ ಸಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.ಈ ಜಗತ್ತಿನಲ್ಲಿ ಎರಡು ರೀತಿಯ ಜ್ಞಾನಗಳಿದ್ದು, ಅವು ವಿದ್ಯೆ (ನಿಜವಾದ ಜ್ಞಾನ) ಮತ್ತು ಅವಿದ್ಯೆ (ಅಜ್ಞಾನ)ಗಳಾಗಿವೆ. ಇವೆರಡೂ ವ್ಯಕ್ತಿಯ ಭೌತಿಕ ಜೀವನ ಮತ್ತು ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭಾರತವು ಈ ಎರಡರ ಮಹತ್ವವನ್ನು ಎತ್ತಿಹಿಡಿಯುತ್ತದೆ ಎಂದು ಅವರು ಹೇಳಿದರು. ಭಾರತವು ಆಧ್ಯಾತ್ಮಿಕತೆಯ ಭೂಮಿಯಾಗಿದ್ದು, ದೇಶದ ರಾಷ್ಟ್ರೀಯತೆಯ ಪ್ರಜ್ಞೆ ಆಳವಾಗಿ ಪರಿಶುದ್ಧವಾಗಿದೆ ಎಂದು ತಿಳಿಸಿದರು

 

Related Articles

error: Content is protected !!