134
ಬಟುಮಿ (ಜಾರ್ಜಿಯಾ) : ಭಾರತದ ಯುವ ಚೆಸ್ ತಾರೆ ದಿವ್ಯಾ ದೇಶ್‌ಮುಖ್ 3ನೇ ಆವೃತ್ತಿಯ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಚೆಸ್ ಅತ್ಯುನ್ನತ ಪಟ್ಟ ಎನಿಸಿಕೊಂಡಿರುವ ಗ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ
ನಾಗ್ಪುರದ 19 ವರ್ಷದ ದಿವ್ಯಾ ಫೈನಲ್‌ನಲ್ಲಿ ತಮ್ಮ ದೇಶದ ಹಿರಿಯ ಆಟಗಾರ್ತಿ, 38 ವರ್ಷದ ಕೊನೆರು ಹಂಪಿ ಅವರನ್ನು ಟೈ ಬ್ರೇಕರ್‌ನಲ್ಲಿ ಸೋಲಿಸಿದರು. ಶನಿವಾರ, ಭಾನುವಾರ ನಡೆದಿದ್ದ 2 ಗೇಮ್ ಗಳು ಡ್ರಾಗೊಂಡಿದ್ದರಿಂದ ಸೋಮವಾರ ಟೈ ಬ್ರೇಕರ್ ನಡೆಸಲಾಯಿತು. ಕಡಿಮೆ ಸಮಯ ನಿಗದಿಪಡಿಸಿ ಆಡಿಸಲಾಗುವ ಟೈ ಬ್ರೇಕರ್‌ನಲ್ಲಿ 1.5-0.5 ಅಂಕಗಳ ಅಂತರದಲ್ಲಿ ಗೆದ್ದ ದಿವ್ಯಾ ವಿಶ್ವಕಪ್ ತಮ್ಮದಾಗಿಸಿಕೊಂಡರು. ಟೈ ಬ್ರೇಕರ್‌ನ ಮೊದಲ ರಾಪಿಡ್ ಗೇಮ್ ಡ್ರಾಗೊಂಡಿತು. ಆದರೆ ಕಪ್ಪು ಕಾಯಿಗಳೊಂದಿಗೆ 2ನೇಗೇಮ್ ಆಡಿದ ದಿವ್ಯಾ ಅಭೂತಪೂರ್ವ ಗೆಲುವಿನೊಂದಿಗೆ ವಿಜಯಮಾಲೆ ಕೊರಳಿಗೇರಿಸಿಕೊಂಡರು.

