ಸೀತಾಮಡಿ: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿದೆ ಇನ್ನೀಗ ಬಿಹಾರದ ಸೀತಾಮಡಿಯಲ್ಲಿ ಸೀತಾಮಾತೆಯ ದೇಗುಲವನ್ನು ಎನ್ಡಿಎ ಸರ್ಕಾರ ನಿರ್ಮಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನುಡಿದರು.
ಸೀತಾಮಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ಸೀತಾಮಾತೆಯ ಜನ್ಮಸ್ಥಾನ ಬಿಹಾರದ ಸೀತಾಮಡಿ ಜಿಲ್ಲೆಯ ಪನೌರಾ ಧಾಮ್ ಮಂದಿರವನ್ನು ಅಂತಾರಾಷ್ಟ್ರೀಯ ಯಾತ್ರಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಎನ್ಡಿಎ ಸರ್ಕಾರ ತೀರ್ಮಾನಿಸಿದೆ ಎಂದರು. ಅಂತೆಯೇ ಸೀತಾ ಮಂದಿರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ನಿತೀಶ್ಕುಮಾರ್ ಸಂಪುಟ 72.47 ಕೋಟಿ ರೂ. ಮಂಜೂರು ಮಾಡಿದೆ ಎಂದರು.