73
ಮುಂಬೈ : ಭಾರತದ ಮೇಲೆ ಶೇ.50ರಷ್ಟು ಅಮೆರಿಕ ತೆರಿಗೆ ದಾಳಿಯ ಪರಿಣಾಮ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರವೂ 706 ಅಂಕ ಕುಸಿತ ಕಂಡು 80080 ಅಂಕಗಳಲ್ಲಿ ಮುಕ್ತಾಯವಾಗಿದೆ. ನಿಫ್ಟಿ 211 ಅಂಕ ಕುಸಿದು 24500 ಅಂಕಗಳಲ್ಲಿ ಮುಕ್ತಾಯವಾ ಗಿದೆ.
ಐಟಿ, ಬ್ಯಾಂಕ್, ದಿನಬಳಕೆಯ ವಸ್ತುಗಳ ವಲಯದ ಕಂಪನಿಗಳ ಷೇರು ಬೆಲೆ ಭಾರೀ ಕುಸಿತ ಕಂಡವು. ಕಳೆದ 2 ವಹಿವಾಟು ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 1555 ಅಂಕ ಕುಸಿತ ಕಂಡಿದೆ. ಷೇರು ಪೇಟೆಯ ಈ ಭಾರೀ ಕುಸಿತದ ಪರಿಣಾಮ ಹೂಡಿಕೆದಾರರಿಗೆ 9.69 ಲಕ್ಷ ಕೋಟಿ ರು.ನಷ್ಟವಾಗಿದೆ.

