ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಮೇ 19ರಂದು ಪ್ರಸಿದ್ದ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಯೊಬ್ಬರು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಗೈಯ್ಯುತ್ತಿರುವುದು ಇದೇ ಮೊದಲು
ಪಂಪೆಯಿಂದ ಇರುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆಯಿದ್ದು, ಈ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿಗೆ ರಾಷ್ಟ್ರಪತಿಯವರ ವೇಳಾಪಟ್ಟಿಯನ್ನೂ ನೀಡಲಾಗಿದೆ ಅವರು ಮೇ 18ರಂದು ಪಾಲಾದಲ್ಲಿರುವ ಸೈಂಟ್ ಥಾಮಸ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ಮೇ 19ರಂದು ಪಂಪೆಗೆ ತೆರಳುವರು
ನೀಲಕ್ಕಲ್ ಹೆಲಿಪ್ಯಾಡ್‌ನಲ್ಲಿ ಇಳಿದು ಪಂಪಾ ಮೂಲ ಶಿಬಿರಕ್ಕೆ ಆಗಮಿಸಿ ಅಲ್ಲಿಂದ 4.25ಕಿ.ಮೀ.ಎತ್ತರದ ಯಾತ್ರಾ ಮಾರ್ಗ ಇಲ್ಲವೇ ತುರ್ತು ರಸ್ತೆಯಲ್ಲಿ ಸಾಗುವ ಮೂಲಕ ಪಾರಂಪರಿಕ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯಲಿದ್ದಾರೆ. ಇದನ್ನು ವಿಶೇಷ ಭದ್ರತಾ ತಂಡ (ಎಸ್ ಪಿಜಿ)ನಿರ್ಧರಿಸಲಿದೆ.ವಿಶೇಷ ಭದ್ರತೆಯಲ್ಲಿ ಅವರು ಶಬರಿಮಲೆಗೆ ತೆರಳುವರು. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲು ಕೇರಳ ಸರಕಾರಕ್ಕೆ ಸೂಚಿಸಲಾಗಿದೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಶಬರಿಮಲೆಗೆ ಭೇಟಿ ನೀಡುವ ಅಪೇಕ್ಷೆ ವ್ಯಕ್ತಪಡಿಸಿದ್ದರು.

