Home » ತಿರುಪತಿಯಲ್ಲಿ ಅಮಿತ್ ಶಾ ಪ್ರಾರ್ಥನೆ
 

ತಿರುಪತಿಯಲ್ಲಿ ಅಮಿತ್ ಶಾ ಪ್ರಾರ್ಥನೆ

by Kundapur Xpress
Spread the love

ತಿರುಪತಿ : ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿ ಧ್ಯಾನದಲ್ಲಿ ತೊಡಗಿದ್ದರೆ, ಇತ್ತ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಮೋದಿ ಪರಮಾಪ್ತನಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಪತ್ನಿ ಸೋನಾಲ್ ಶಾ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ ಅವರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಶಾ ಅವರನ್ನು ಆಶೀರ್ವದಿಸಿದ ದೇಗುಲದ ಅರ್ಚಕರು ಅವರಿಗೆ ಡೈರಿ, ಆಯುರ್ವೇದ ಉತ್ಪನ್ನಗಳು, ಲಡ್ಡು ಪ್ರಸಾದ ಸೇರಿದಂತೆ ಇತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು. ಸಂಜೆ ಗುಜರಾತ್‌ನ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದರು. ಗುರುವಾರ ತಮಿಳುನಾಡಿನ ಪುದುಕೊಟ್ಟಿನಲ್ಲಿರುವ ಕೊಟ್ಟೆ ಭೈರವ ದೇವಾಲಯದಲ್ಲಿ ಗೃಹ ಸಚಿವರು ಪ್ರಾರ್ಥನೆ ಸಲ್ಲಿಸಿದ್ದರು.

   

Related Articles

error: Content is protected !!