Home » ಸಿಂದೂರದಲ್ಲಿ ವೈರಿ ರಾಷ್ಟ್ರದ 6 ವಿಮಾನ ಧ್ವಂಸ
 

ಸಿಂದೂರದಲ್ಲಿ ವೈರಿ ರಾಷ್ಟ್ರದ 6 ವಿಮಾನ ಧ್ವಂಸ

by Kundapur Xpress
Spread the love

ಬೆಂಗಳೂರು : ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನದ ಐದು ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನ ಸೇರಿ ಆರು ವಿಮಾನಗಳನ್ನು ಭಾರತೀಯ ವಾಯುಪಡೆ (ಐಎಎಫ್) ಹೊಡೆದುರುಳಿಸಿತು ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಹೇಳಿದ್ದಾರೆ.

ಅಪರೇಷನ್ ಸಿಂದೂರ ನಡೆದು ಮೂರು ತಿಂಗಳ ಬಳಿಕ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ವಾಯುಪಡೆಗೆ ಉಂಟಾದ ಹಾನಿಯ ಪ್ರಮಾಣವನ್ನು ವಾಯುಪಡೆಯ ಉನ್ನತ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಇದೇ ಮೊದಲು ಬಹಿರಂಗಪಡಿಸಿದ್ದಾರೆ.

ಬೆಂಗಳೂರಿನ ಎಚ್‌ಎಎಲ್ ಮ್ಯಾನೇಜೆಂಟ್ ಅಕಾಡೆಮಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಏರ್ ಚೀಫ್ ಮಾರ್ಷಲ್ ಎಲ್.ಎಂ. ಕತ್ರೆ ಸ್ಮಾರಕ ಉಪನ್ಯಾಸದಲ್ಲಿ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಆಪರೇಷನ್ ಸಿಂದೂರದ ಕುರಿತು ಮಾತನಾಡಿದರು.

S-400 ಗೇಮ್ ಚೇಂಜ‌ರ್ :

ಪಾಕಿಸ್ತಾನ ವಾಯುಪಡೆಯ ಐದು ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನ ನಾಶವಾಗಿದೆ. ದೊಡ್ಡ ವಿಮಾನವು ವಾಯುಗಾಮಿ ಕಣ್ಣಾವಲು ಅಥವಾ ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯ ವಿಮಾನವಾಗಿರಬಹುದು. ಇತ್ತೀಚೆಗೆ ಖರೀದಿಸಿದ ಎಸ್-400 ಈ ಕಾರ್ಯಾಚರಣೆಯ ಗೇಮ್ ಚೇಂಜರ್ ಆಗಿತ್ತು. ಶತ್ರು ವಾಯುಪ್ರದೇಶದೊಳಗೆ ದೂರದ ಗುರಿಗಳನ್ನು ನಾಶಮಾಡಲು ರಷ್ಯಾ ನಿರ್ಮಿತ ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯಿಂದ ಸಾಧ್ಯವಾಯಿತು. ಕಾರ್ಯಾಚರಣೆಯನ್ನು 300 ಕಿ.ಮೀ. ದೂರದಿಂದ ನಡೆಸಲಾಗಿದೆ ಎಂದರು

 

Related Articles

error: Content is protected !!