Home » ವಿಮಾನ ಕುಲುಕಾಟ : ಓರ್ವ ಸಾವು
 

ವಿಮಾನ ಕುಲುಕಾಟ : ಓರ್ವ ಸಾವು

ಲಂಡನ್‌-ಸಿಂಗಾಪುರ ವಿಮಾನದಲ್ಲಿ ದುರ್ಘಟನೆ

by Kundapur Xpress
Spread the love

ಬ್ಯಾಂಕಾಕ್ : ಪ್ರಕ್ಷುಬ್ಧ ವಾತಾವರಣದ ಪರಿಣಾಮ 229 ಜನರು ಪ್ರಯಾಣಿಸುತ್ತಿದ್ದ ವಿಮಾನ ಭಾರೀ ಕುಲುಕಾಟಕ್ಕೆ ಒಳಗಾಗಿ ಓರ್ವ ಪ್ರಯಾಣಿಕ ಸಾವನ್ನಪ್ಪಿ, 30 ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಲಂಡನ್‌ನಿಂದ ಸಿಂಗಾಪುರಕ್ಕೆ ಪ್ರಯಾಣಿಸುತ್ತಿದ್ದ ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಈ ಘಟನೆ ನಡೆದಿದೆ. ಪ್ರತಿಕೂಲ ವಾತಾವರಣದ ಪರಿಣಾಮ, ವಿಮಾನ ದಿಢೀರನೆ ಸಾವಿರಾರು ಅಡಿ ಕೆಳಗೆ ಕುಸಿದು ಮತ್ತು ಭಾರೀ ಕುಲುಕಾಟಕ್ಕೆ ತುತ್ತಾಗುವ ಘಟನೆಗಳು ಹೊಸದಲ್ಲವಾದರೂ, ಸಾವು ಪ್ರಕರಣ ಅತ್ಯಂತ ವಿರಳವಾಗಿದೆ

211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಒಳಗೊಂಡ ಸಿಂಗಾಪುರ್ ಏರ್‌ಲೈನ್ಸ್  ಮಂಗಳವಾರ ಲಂಡನ್‌ನಿಂದ- ಸಿಂಗಾಪುರಕ್ಕೆ ಪ್ರಯಾಣಿಸುತ್ತಿತ್ತು. 37000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ಪ್ರಕ್ಷುಬ್ಧ ವಾತಾವರಣದ ಪರಿಣಾಮಕ್ಕೆ ತುತ್ತಾಗಿದೆ ಹೀಗಾಗಿ ವಿಮಾನವನ್ನು ಬ್ಯಾಂಕಾಕ್‌ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ. ಬಳಿಕ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 37000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಕೇವಲ 3 ನಿಮಿಷದ ಅವಧಿಯಲ್ಲಿ 31000 ಅಡಿಗೆ ಕುಸಿದಿರುವುದು ದಾಖಲೆಗಳಲ್ಲಿ ಕಂಡುಬಂದಿದೆ. ಅಂದರೆ ಏಕಾಏಕಿ 6000 ಅಡಿ ಕುಸಿತವಾಗಿದೆ. ಇದು ಘಟನೆಗೆ ಕಾರಣವಾಗಿದೆ

 

Related Articles

error: Content is protected !!