ಹೊಸದಿಲ್ಲಿ : ಭಾರತೀಯ ಮೌಲ್ಯಗಳ ಬಗ್ಗೆ ಅಭಿಮಾನವುಳ್ಳವರು, ಸನಾತನ ಸಂಸ್ಕೃತಿಯ ಆರಾಧಕರಿಗೆ ಪೌಷ ಪೌರ್ಣಮಿ ವಿಶೇಷ ಶುಭ ದಿನವೆಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಭಾರತದ ಶಾಶ್ವತ ಆಧ್ಯಾತ್ಮಿಕ ಪರಂಪರೆಯನ್ನು ಒಳಗೊಂಡ ಮಹಾ ಕುಂಭಮೇಳವು ಪವಿತ್ರ ನಗರ ಪ್ರಯಾಗ್ ರಾಜ್‌ನಲ್ಲಿ ಸೋಮವಾರ ವಿಧ್ಯುಕ್ತ ಚಾಲನೆ. ಪಡೆದಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ಗೆ ಈ ಶುಭ ಸಂದೇಶ ಹಾಕಿದ್ದಾರೆ. ಅನನ್ಯ ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗಳು ಪ್ರಯಾಗ್‌ರಾಜ್‌ನಲ್ಲಿ ಸಂಪನ್ನಗೊಂಡಿರುವ ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಜನರ ಒಗ್ಗೂಡಿಸಿವೆ. ಅಸಂಖ್ಯ ಜನರು ಪ್ರಯಾಗ್ ರಾಜ್‌ಗೆ ಭೇಟಿ ನೀಡಿರುವುದು, ಪವಿತ್ರ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನಗೈದು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಿರುವುದ ಕಂಡು ಸಂತಸವಾಗಿದೆ. ಯಾತ್ರಿಕರು, ಪ್ರವಾಸಿಗಳಿಗೆ ಪ್ರಯಾಗ್‌ರಾಜ್‌ನಲ್ಲಿನ ವಾಸ್ತವ್ಯ ಅದ್ಭುತ ಅನುಭವವಾಗಲಿ ಎಂದು ಮೋದಿ ಹಾರೈಸಿದ್ದಾರೆ.