175
ಮುಂಬೈ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಹಲವು ದೇಶಗಳ ವಸ್ತುಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳು ಮಂಕಾಗಿದ್ದು, ಇದಕ್ಕೆ ಭಾರತ ಕೂಡ ಸೇರಿಕೊಂಡಿದೆ. ಬಾಂಬೆ ಷೇರುಪೇಟೆ ಸೂಚ್ಯಂಕ ಒಂದೇ ದಿನ 2227 ಅಂಕ ಹಾಗೂ ನಿಫ್ಟಿ 742 ಅಂಕಗಳ ಮಹಾಪತನ ಕಂಡಿವೆ. 10 ತಿಂಗಳಲ್ಲಿ 2024ರ ಲೋಕಸಭೆ ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಏಕದಿನದ ಅತಿ ಕನಿಷ್ಠ ಕುಸಿತವಾಗಿದೆ. ಇದರಿಂದ ಒಂದೇ ದಿನ ಹೂಡಿಕೆದಾರರಿಗೆ 14 ಲಕ್ಷ ಕೋಟಿ ನಷ್ಟವಾಗಿದೆ

