ಕೇಪ್ ಕಾರ್ನಿವಲ್ : ಸತತ 7 ತಿಂಗಳಿಗೂ ಅಧಿಕ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಇದೀಗ ಮೊದಲ ಹೊರಗಡಿಯಿಟ್ಟು ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ
ಬಾಹ್ಯಾಕಾಶ ಕೇಂದ್ರದ ಕಮಾಂಡರ್ ಆಗಿರುವ ಸುನಿತಾ ನಾಸಾದ ನಿಕ್ ಹೇಗ್ ಅವರ ಜತೆಗೂಡಿ ಕೇಂದ್ರದ ಹೊರಗೆ ಕೆಲ ದುರಸ್ತಿ ಕೆಲಸವನ್ನು ಮಾಡಬೇಕಿದ್ದುದರಿಂದ ಹೊರ ಬಂದಿದ್ದರು. ಕಳೆದ ವರ್ಷ ಜೂನ್ನಲ್ಲಿ8 ದಿನಗಳ ಯೋಜನೆಯ ಭಾಗವಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ, ಸ್ಟಾರ್ಲೈನ್ ಕ್ಯಾಪ್ಸಲ್ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಅಲ್ಲೇ ಉಳಿಯಬೇಕಾಗಿ ಬಂದಿತ್ತು ಅವರು ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಭೂಮಿಗೆ ಮರಳುವ ನಿರೀಕ್ಷೆಯಿದೆ.